ಶಾಲಾ ಬ್ಲಾಗ್ ನ ಉದ್ಘಾಟನಾ ದಿನಾಂಕ: 15-08-2020

Friday, December 31, 2021

2021-22 ನೇ ಸಾಲಿನ ಶಾಲಾ ಸಂಸತ್ತಿನ ಬಜೆಟ್ ಮಂಡನೆ

ಇಂದು ನಮ್ಮ ಶಾಲೆಯಲ್ಲಿ 2021-22 ನೇ ಸಾಲಿನ ಶಾಲಾ ಸಂಸತ್ತಿನ ಬಜೆಟ್ ನ್ನು ಶಾಲಾ ಸಂಸತ್ತಿನ ಹಣಕಾಸು ಮಂತ್ರಿಯಾದ ಕುಮಾರಿ ಹರ್ಷಿತ 9ನೇ ತರಗತಿ ಇವರು ಎಲ್ಲರ ಸಮ್ಮುಖದಲ್ಲಿ ಮಂಡಿಸಿದರು. ನಂತರ ಬಜೆಟ್ ಬಗೆಗೆ ಚರ್ಚೆಗೆ ಅವಕಾಶ ನೀಡಿ ಹಾಜರಿದ್ದ ಎಲ್ಲ ವಿದ್ಯಾರ್ಥಿಗಳ ಒಪ್ಪಗೆಯ ಮೇರೆಗೆ ಸಹಿಗಾಗಿ ರಾಷ್ಟ್ರಪತಿಗಳಿಗೆ ಸಲ್ಲಿಸಲಾಯಿತು. ರಾಷ್ಟ್ರಪತಿಗಳಾದ ಮುಖ್ಯಶಿಕ್ಷಕ ಟಿ ಧನಂಜಯ ಬಜೆಟ್ ಪ್ರತಿಗೆ ಸಹಿ ಹಾಕುವುದರೊಂದಿಗೆ ಅನುಮೋದನೆ  ನೀಡಿದರು. 

 

Thursday, December 30, 2021

ಪೋಷಕರ ಸಭೆ

ದಿನಾಂಕ 30-12-2021 ರಂದು ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿ ಬಗ್ಗೆ ಚರ್ಚಿಸಲು ಪೋಷಕರ ಸಭೆ ಕರೆಯಲಾಗಿತ್ತು. ಸಭೆಯಲ್ಲಿ ವಿದ್ಯಾರ್ಥಿಗಳ 3 ನೇ ರೂಪಣಾತ್ಮಕ ಪರೀಕ್ಷೆಯಲ್ಲಿ ಪಡೆದ ಅಂಕಗಳ ಕುರಿತು ಚರ್ಚಿಸಲಾಯಿತು. ಉತ್ತರ ಪತ್ರಿಕೆಗಳನ್ನು ಪೋಷಕರಿಗೆ ನೀಡಿ ಮಕ್ಕಳು ಇನ್ನೂ ಹೆಚ್ಚಿನ ಅಂಕಗಳಿಸಲು ಶಿಕ್ಷಕರೊಂದಿಗೆ ಪೋಷಕರೂ ಮನೆಗಳಲ್ಲಿ ಓದಲು ಉತ್ತೇಜನ ನೀಡುವಂತೆ ಮನವೊಲಿಸಲಾಯ್ತು....

 

Thursday, December 23, 2021

ರಾಷ್ಟ್ರೀಯ ಗಣಿತ ದಿನ 22-12-2021

ದಿನಾಂಕ 22-12-2021 ರಂದು  ಬೆಳಗಿನ ಪ್ರಾರ್ಥನೆಯ ನಂತರ ರಾಷ್ಟ್ರೀಯ ಗಣಿತ ದಿನದ ಅಂಗವಾಗಿ ಶ್ರೀನಿವಾಸ ರಾಮಾನುಜನ್ ಕುರಿತು ನಮ್ಮ ಶಾಲೆಯ ಗಣಿತ ಶಿಕ್ಷಕರಾದ ಕೆ ಶಿವಕುಮಾರ್ ಮಕ್ಕಳಿಗೆ ಉಪನ್ಯಾಸ ನೀಡಿದರು

 

Saturday, December 18, 2021

ವಾಲಿಬಾಲ್ ಕ್ರೀಡಾಕೂಟ

 

ಇಂದು ನಮ್ಮ ಶಾಲೆಯ ವಿದ್ಯಾರ್ಥಿಗಳಿಗೆ ವಾಲಿಬಾಲ್ ಕ್ರೀಡಾಕೂಟ ಏರ್ಪಡಿಸಲಾಗಿತ್ತು. ಬಹು ದಿನಗಳ ನಂತರ ಆಯೋಜಿಸಿದ್ದ ಈ ವಾಲಿಬಾಲ್ ಕ್ರೀಡಾಕೂಟದಲ್ಲಿ 4 ತಂಡಗಳು ಬಹಳ ಉತ್ಸಾಹದಿಂದ ಪಾಲ್ಗೊಂಡರು, ಶಿಕ್ಷಕರು ಮತ್ತು ಉಳಿದ ವಿದ್ಯಾರ್ಥಿಗಳು ಕ್ರೀಡಾಕೂಟದಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಿದರು. ಮುಖ್ಯಶಿಕ್ಷಕರಾದ ಟಿ ಧನಂಜಯ ಕ್ರೀಡಾಕೂಟವನ್ನು ಉದ್ಘಾಟಿಸಿದರೆ ದೈಹಿಕ ಶಿಕ್ಷಣ ಶಿಕ್ಷಕರಾದ ಆರ್ ಗಿರೀಶ್ ಕ್ರೀಡಾಕೂಟ ನಡೆಸಿಕೊಟ್ಟರು. ಎಲ್ಲಾ ಶಿಕ್ಷಕರು ಇದರಲ್ಲಿ ಭಾಗವಹಿಸಿ ಕೊನೆಗೆ ಸ್ವತಃ ಶಿಕ್ಷಕರೂ ಒಂದು ಮ್ಯಾಚ್ ಆಡಿ ಮಕ್ಕಳನ್ನು ರಂಜಿಸಿದ್ದು ವಿಶೇಷವಾಗಿತ್ತು.

Friday, December 10, 2021

ವಿಶ್ವ ಮಾನವ ಹಕ್ಕುಗಳ ದಿನಾಚರಣೆ 10-12-2021

ಇಂದು ನಮ್ಮ ಶಾಲೆಯಲ್ಲಿ ಮಾನವ ಹಕ್ಕುಗಳ ದಿನಾಚರಣೆಯನ್ನು ಆಚರಿಸಲಾಯಿತು. ಈ ಕುರಿತು ಶಿಕ್ಷಕರಾದ ವಿ ಕೆ ಶಾಂತಕುಮಾರ ಮಾತನಾಡಿ ಮಾನವ ಹಕ್ಕುಗಳ ಅಗತ್ಯತೆ ಮತ್ತು ಮಾನವ ಹಕ್ಕುಗಳ ಆಯೋಗದ ಕುರಿತು ತಿಳಿಸಿಕೊಟ್ಟರು...

Saturday, December 4, 2021

ಶಾಲಾ ಸಂಸತ್ತಿನ ಮೊದಲ ಸಚಿವ ಸಂಪುಟ ಸಭೆ, ಹಂಚಿಕೆಯಾದ ಖಾತೆಗಳ ಜವಾಬ್ದಾರಿ ನಿರ್ವಹಣೆ ಕುರಿತು ಚರ್ಚೆ

ಇಂದು ನಮ್ಮ ಶಾಲೆಯ ಶಾಲಾ ಸಂಸತ್ತಿನ ಮೊದಲ ಸಚಿವ ಸಂಪುಟ ಸಭೆಯನ್ನು ಆಯೋಜಿಸಲಾಗಿತ್ತು. ಪ್ರಧಾನ ಮಂತ್ರಿಯನ್ನು ಒಳಗೊಂಡಂತೆ ಸಚಿವ ಸಂಪುಟದ ಎಲ್ಲ ಸಚಿವರೂ ಹಾಜರಾಗಿದ್ದರು. 

 
ಶಿಕ್ಷಕರು ಸಭೆಯಲ್ಲಿ ಈಗಾಗಲೇ ಸಚಿವರಿಗೆ ಹಂಚಿಕೆಯಾಗಿರುವ ಖಾತೆಗಳ ಜವಾಬ್ದಾರಿಗಳನ್ನು ಹಂಚಿಕೆ ಮಾಡಿ ಅವರು ನಿರ್ವಹಿಸಬೇಕಾದ ಕಾರ್ಯಗಳನ್ನು ತಿಳಿಸಿ ಅದರ ಬಗೆಗೆ ಚರ್ಚಿಸಿ ಮಾರ್ಗದರ್ಶನ ಮಾಡಲಾಯಿತು. ಪ್ರತಿಯೊಬ್ಬ ಸಚಿವರಿಗೆ ಅವರಿಗೆ ವಹಿಸಿದ ಖಾತೆಗಳ ನಿರ್ವಹಣೆಗೆ ಸಲಹೆಗಾರರಾಗಿ ಒಬ್ಬರು ಶಿಕ್ಷಕರು ಮತ್ತು 8-10 ವಿದ್ಯಾರ್ಥಿಗಳನ್ನು ಒಳಗೊಂಡ ತಂಡವನ್ನು ರಚಿಸಿಕೊಡಲಾಗುವುದು, ಅವರ ಸಹಕಾರದೊಂದಿಗೆ ತಮ್ಮ ತಮ್ಮ ಖಾತೆಗಳನ್ನು ಸಮರ್ಥವಾಗಿ ನಿರ್ವಹಿಸುವಂತೆ ತಿಳಿಸಲಾಯಿತು. ನೂತನ ಸಚಿವರುಗಳು ಬಹು ಉತ್ಸಹದಿಂದ ಚರ್ಚೆಯಲ್ಲಿ ಪಾಲ್ಗೊಂಡರು... 

ಅಕ್ಷರ ದಾಸೋಹ ಯೋಜನೆಯ ಆಹಾರ ಧಾನ್ಯಗಳನ್ನು ವಿತರಣೆ

ಇಂದು ನಮ್ಮ ಶಾಲೆಯಲ್ಲಿ ಅಕ್ಷರ ದಾಸೋಹ ಯೋಜನೆಯಡಿ ಸರಬರಾಜಾದ ಆಹಾರ ಧಾನ್ಯಗಳನ್ನು ವಿದ್ಯಾರ್ಥಿಗಳ ಪೋಷಕರನ್ನು ಶಾಲೆಗೆ ಕರೆಸಿ ವಿತರಿಸಲಾಯಿತು.

 

Wednesday, December 1, 2021

ಕ್ಷೀರಭಾಗ್ಯ ಯೋಜನೆಯ ಪುನರಾರಂಭ ಮತ್ತು ಏಡ್ಸ್ ದಿನಾಚರಣೆ 01-12-2021

ಇಂದು ನಮ್ಮ ಶಾಲೆಯಲ್ಲಿ ಮಕ್ಕಳಿಗೆ ಕೆನೆಭರಿತ ಬಿಸಿಹಾಲು ವಿತರಿಸುವ ಮೂಲಕ ಕ್ಷೀರಭಾಗ್ಯ ಯೋಜನೆಯನ್ನು ಪುನರಾರಂಭ ಮಾಡಲಾಯಿತು. ಈ ಸಂದರ್ಭದಲ್ಲಿ ಎಲ್ಲಾ ಶಿಕ್ಷಕರೂ ಹಾಜರಿದ್ದರು.

ಇಂದು ನಮ್ಮ ಶಾಲೆಯಲ್ಲಿ ವಿಶ್ವ ಏಡ್ಸ್ ದಿನಾಚರಣೆ ಕಾರ್ಯಕ್ರಮದಲ್ಲಿ ವಿಜ್ಞಾನ ಶಿಕ್ಷಕರಾದ ಡಿ ಯೋಗೇಂದ್ರಪ್ಪ ಏಡ್ಸ್ ದಿನಾಚರಣೆಯ ಹಿನ್ನೆಲೆ, ರೋಗ ಲಕ್ಷಣ, ಹೆಚ್.ಐ.ವಿ ವೈರಸ್ ಕುರಿತು ಮಾತನಾಡಿದರು 

ಶಿಕ್ಷಕರಾದ ಟಿ ಕೆ ಶಿವಕುಮಾರ್ ಏಡ್ಸ್ ಹರಡುವ ಬಗೆಯನ್ನು ವಿವರಿಸಿದರು. ಮುಖ್ಯಶಿಕ್ಷಕರಾದ ಟಿ. ಧನಂಜಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

 

ಶಾಲಾವಾಣಿ, ಮಾಸ ಪತ್ರಿಕೆ - ನವೆಂಬರ್ 2021

 'ಶಾಲಾವಾಣಿ' ಮಾಸ ಪತ್ರಿಕೆ- ನವೆಂಬರ್ 2021

 
ಇಂದು ನಮ್ಮ ಶಾಲೆಯ ಚೊಚ್ಚಲ ಮಾಸ ಪತ್ರಿಕೆ 'ಶಾಲಾವಾಣಿ' ಯನ್ನ ಶಾಲೆಯ ಮುಖ್ಯೋಪಾಧ್ಯಾಯರಾದ ಟಿ. ಧನಂಜಯ  ಬಿಡುಗಡೆ ಮಾಡಿದರು. ಇದು ಪ್ರತೀ ತಿಂಗಳು ಶಾಲೆಯಲ್ಲಿ ನಡೆದ ಚಟುವಟಿಕೆಗಳ ವರದಿ ಮತ್ತು ಮಕ್ಕಳ ಸೃಜನಶೀಲ ಬರಹಗಳಾದ ಕಥೆ, ಕವನ, ಡ್ರಾಯಿಂಗ್, ಲೇಖನ ಬರಹ, ಪ್ರಬಂಧ ಮುಂತಾದವುಗಳನ್ನು ಪ್ರಕಟಿಸಬೇಕೆಂಬ ಸದುದ್ದೇಶದಿಂದ ಹೊರಡಿಸಿದ ಪತ್ರಿಕೆಯಾಗಿದೆ.... 

Friday, November 26, 2021

ಸಂವಿಧಾನ ದಿನ ಮತ್ತು ವಿದ್ಯಾರ್ಥಿ ಸಂಘದ ಉದ್ಘಾಟನೆ

ದಿನಾಂಕ 26-11-2021 ರಂದು ಸಂವಿಧಾನ ದಿವನ್ನು ಆಚರಿಸಲಾಯಿತು. ಅಂದು ಮಕ್ಕಳಿಗೆ ಸಂವಿಧಾನದ ಪ್ರಸ್ತಾವನೆಯನ್ನು  ಹೇಳಿಕೊಡಲಾಯಿತು. ಮಕ್ಕಳು ಮತ್ತು ಶಿಕ್ಷಕರು ಸಂವಿಧಾನ ದಿನದ ಕುರಿತು ಮಾತನಾಡಿದರು. ಮುಖ್ಯಶಿಕ್ಷಕರಾದ ಟಿ ಧನಂಜಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

2021-22 ನೇ ಸಾಲಿನ ಶಾಲಾ ಸಂಸತ್ತು ಚುನಾವಣೆಯಲ್ಲಿ ಆಯ್ಕೆಯಾದ ಅಭ್ಯರ್ಥಿಗಳಿಗೆ ಶಾಲಾ ಸಂಸತ್ತಿನ ರಾಷ್ಟ್ರಪತಿಗಳಾದ ಟಿ ಧನಂಜಯರವರು ವಿವಿಧ ಖಾತೆಗಳಿಗೆ ಆಯ್ಕೆಯಾದ ಮಂತ್ರಿಗಳಿಗೆ ಪ್ರಮಾಣ ವಚನ ಬೋಧಿಸಿದರು

2021-22 ನೇ ಸಾಲಿನ ವಿದ್ಯಾರ್ಥಿ ಸಂಘದ ಉದ್ಘಾಟನಾ ಸಮಾರಂಭವನ್ನು ಹಮ್ಮಿಕೊಳ್ಳಲಾಗಿತ್ತು. ವಿದ್ಯಾರ್ಥಿ ಸಂಘದ ವತಿಯಿಂದ ಮಕ್ಕಳಿಗೆ ಸಹಿ ಊಟದ ವ್ಯವಸ್ಥೆ ಮಾಡಲಾಗಿತ್ತು.

 

Thursday, November 25, 2021

ಜಂತುಹುಳು ನಿವಾರಣಾ ಜಾಗೃತಿ ಮತ್ತು ಅಲ್ಬೆಂಡೋಜೋಲ್ ಮಾತ್ರೆ ವಿತರಣೆ

ದಿನಾಂಕ 25-11-2021 ರಂದು ನಮ್ಮ ಶಾಲೆಯಲ್ಲಿ ಗೊಪ್ಪೇನಹಳ್ಳಿ ಆರೋಗ್ಯ ಕೇಂದ್ರದ ವತಿಯಿಂದ ಮಕ್ಕಳಿಗೆ ಜಂತು ಹುಳು ನಿವಾರಣೆ ಕುರಿತು ಜಾಗೃತಿ ಮಾಡಿಸಲಾಯಿತು. ಇದೇ ಸಂದರ್ಭದಲ್ಲಿ ಎಲ್ಲ ಮಕ್ಕಳಿಗೆ ಜಂತು ಹುಳು ನಿವಾರಣೆಯ ಮಾತ್ರೆಗಳನ್ನು ಸಾಮೂಹಿಕವಾಗಿ ವಿತರಿಸಲಾಯಿತು...



 

Monday, November 22, 2021

ಕನಕದಾಸ ಜಯಂತಿ

ದಿನಾಂಕ 22-11-2021 ರಂದು ನಮ್ಮ ಶಾಲೆಯಲ್ಲಿ ದಾಸಶ್ರೇಷ್ಟ ಕನಕದಾಸರ ಜಯಂತಿಯನ್ನು ಆಚರಿಸಲಾಯಿತು


ನಮ್ಮ ಶಾಲೆಯ ಸ್ಥಳೀಯ ಸಲಹಾ ಸಮಿತಿಯ ಸದಸ್ಯರಾಗಿದ್ದ ವಡ್ನಾಳ್ ಗ್ರಾಮದ ಶರಣ ಬಿ ಜಯಪ್ಪನವರು  ದಿನಾಂಕ  16-11-2021 ರ ಮಂಗಳವಾರ ಅನಾರೋಗ್ಯದಿಂದ ನಿಧನರಾದರು. ಇವರ ನಿಧನಕ್ಕೆ ಶಾಲಾ ಸ್ಥಳೀಯ ಸಲಹಾ ಸಮಿತಿಯವರು, ಮುಖ್ಯೋಪಾಧ್ಯಾಯರು ಮತ್ತು ಸಿಬ್ಬಂದಿ ವರ್ಗದವರು ಸಂತಾಪ ಸೂಚಿಸಿ ಮೃತರ ಆತ್ಮಕ್ಕೆ ಚಿರಶಾಂತಿ ದೊರೆಯಲೆಂದು ಪ್ರಾರ್ಥಿಸಿದರು.

Saturday, November 13, 2021

ಪೋಷಕರ ಸಭೆ

ಇಂದು ನಮ್ಮ ಶಾಲೆಯಲ್ಲಿ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳ ಪೋಷಕರ ಸಭೆ ಆಯೋಜಿಸಲಾಗಿತ್ತು. ಸಭೆಯಲ್ಲಿ ಮಕ್ಕಳ ಶೈಕ್ಷಣಿಕ ಪ್ರಗತಿಯ ಕುರಿತು ಚರ್ಚಿಸಲಾಯಿತು.

 

Friday, November 12, 2021

ಕಾನೂನು ಅರಿವು-ನೆರವು ಕಾರ್ಯಕ್ರಮ

ದಿನಾಂಕ : 12-11-2021 ರಂದು ನಮ್ಮ ಶಾಲೆಯಲ್ಲಿ ಭಾರತದ ಸ್ವಾತಂತ್ರ್ಯದ 75 ನೇ ಅಜಾದ್‌ ಕಾ ಅಮೃತ್‌ ಮಹೋತ್ಸವ ಆಚರಣೆ ಪ್ರಯುಕ್ತ ಕಾನೂನು ಅರಿವು-ನೆರವು ಕಾರ್ಯಕ್ರಮವನ್ನು ತಾಲ್ಲೂಕು ಕಾನೂನು ಸೇವಾ ಸಮಿತಿ ಚನ್ನಗಿರಿ, ವಕೀಲರ ಸಂಘ ಚನ್ನಗಿರಿ ಹಾಗೂ ವಿವಿಧ ಸರ್ಕಾರಿ ಇಲಾಖೆಗಳ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿತ್ತು. ಈ ಸಂದರ್ಭದಲ್ಲಿ ಚನ್ನಗಿರಿ ತಾಲ್ಲೂಕು ಕೋರ್ಟ್‌ನ ಸಿವಿಲ್‌ ನ್ಯಾಯಾಧೀಶರಾದ ಶ್ರೀಮತಿ ಕನ್ನಿಕ ಮೇಡಂ,ಸರ್ಕಾರಿ ಅಭಿಯೋಜಕರಾದ ಸರಿತಾ ಮೇಡಂ, ಪ್ರಾದೇಶಿಕ ಸಾರಿಗೆ ಅಧಿಕಾರಿಗಳಾದ ಮಹಮ್ಮದ್‌ ಕಾಲಿದ್ ಸರ್‌, ಚನ್ನಗಿರಿ ಉಪ ನಿರೀಕ್ಷಕರಾದ ಚಂದ್ರಶೇಖರ್‌ ಸರ್‌, ವಕೀಲರ ಸಂಘದ ಅಧ್ಯಕ್ಷರಾದ ರುದ್ರಪ್ಪನವರು ಸಮಾರಂಭದಲ್ಲಿ ಹಾಜರಿದ್ದರು. ಈ ಸಮಾರಂಭವನ್ನು ಪ್ರಾದೇಶಿಕ ಸಾರಿಗೆ ಅಧಿಕಾರಿಗಳಾದ ಮಹಮ್ಮದ್‌ ಕಾಲಿದ್ ಸರ್‌ ಉದ್ಘಾಟಿಸಿದರೆ ಶಾಲಾ ಮುಖ್ಯೋಪಾಧ್ಯಾಯರಾದ ಧನಂಜಯ ಸರ್‌ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಮಕ್ಕಳಿಗೆ ಕಾನೂನಿನ ಬಗ್ಗೆ ಅರಿವು ಮೂಡಿಸಲಾಯಿತು...






Monday, November 8, 2021

ಮಾತಾಡ್‌ ಮಾತಾಡ್‌ ಕನ್ನಡ


ದಿನಾಂಕ 28-10-2021 ರಂದು ಮಾತಾಡ್‌ ಮಾತಾಡ್‌ ಕನ್ನಡ ಕಾರ್ಯಕ್ರಮದ ಅಂಗವಾಗಿ ಕನ್ನಡ ತಾಯಿ ಭುವನೇಶ್ವರಿ ಪೋಟೋ ಜೊತೆಗೆ ಕನ್ನಡ ಘೋಷಣೆಗಳನ್ನು ಹಿಡಿದು ಊರಿನಲ್ಲಿ ಜಾಥಾ ನಡೆಸಲಾಯಿತಿ. ನಂತರ ಶಾಲಾ ರಂಗಮಂದಿರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮೂರು ಕನ್ನಡ ಹಾಡುಗಳನ್ನು ಸಾಮೂಹಿಕವಾಗಿ ಹಾಡಲಾಯಿತು.

ದಿನಾಂಕ 21-10-2021 ರಿಂದ ರಾಜ್ಯ ಸರ್ಕಾರದ ಆದೇಶದಂತೆ ಅಕ್ಷರ ದಾಸೋಹ ಯೋಜನೆಯ ಅಡಿಯಲ್ಲಿ ಮದ್ಯಾಹ್ನದ ಬಿಸಿಯೂಟವನ್ನು ಪುನರಾರಂಭ ಮಾಡಲಾಯಿತು. ಅಂದು ಮಕ್ಕಳಿಗೆ ಸಿಹಿ ಊಟ ನೀಡಲಾಯಿತು. ಶಾಲೆಯ ಎಲ್ಲ ಸಿಬ್ಬಂದಿ ವರ್ಗದವರು ಹಾಜರಿದ್ದರು


ದಿನಾಂಕ 14-10-2021 ರಂದು ನಮ್ಮ ಶಾಲೆಯ ಸ್ಥಳೀಯ ಸಲಹಾ ಸಮಿತಿಯ ಅಧ್ಯಕ್ಷರಾಗಿದ್ದ ಶರಣ ಕೆ ಶಿವಲಿಂಗಪ್ಪನವರು, ಕಂಚಿಗನಹಾಳ್‌ ಇವರು ಕಡಿಮೆ ರಕ್ತದೊತ್ತಡ (Low BP) ದಿಂದ ಲಿಂಗೈಕ್ಯರಾಗಿರುತ್ತಾರೆ. ಇವರು ಚನ್ನಗಿರಿ ಸಾದು ವೀರಶೈವ ಸಮಾಜದ ಅಧ್ಯಕ್ಷರೂ ಆಗಿದ್ದರು. ಇವರ ಅನಿರೀಕ್ಷಿತ ನಿಧನಕ್ಕೆ ಶಾಲಾ ಸ್ಥಳೀಯ ಸಲಹಾ ಸಮಿತಿಯ ಎಲ್ಲ ಸದಸ್ಯರು, ಮುಖ್ಯೋಪಾಧ್ಯಾಯರು ಮತ್ತು ಸಿಬ್ಬಂದಿ ವರ್ಗದವರು ಸಂತಾಪ ಸೂಚಿಸಿರುತ್ತಾರೆ.

ದಿನಾಂಕ 02-10-2021 ರಂದು ನಮ್ಮ ಶಾಲೆಯಲ್ಲಿ ಗಾಂಧೀ ಜಯಂತಿ, ಲಾಲ್‌ ಬಹದ್ದೂರ್‌ ಶಾಸ್ತ್ರಿ ಮತ್ತು ಶ್ರೀ ಶಿವಕುಮಾರ ಶಿವಾಚಾರ್ಯ ಸ್ವಾಮಿಗಳವರ 29ನೆಯ ಶ್ರದ್ಧಾಂಜಲಿ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು

ನಮ್ಮ ಶಾಲೆಯಲ್ಲಿ  2020-21 ನೇ ಸಾಲಿನ ಅತ್ಯುತ್ತಮ ವಿದ್ಯಾರ್ಥಿ ಮತ್ತು ಅತ್ಯುತ್ತಮ ವಿದ್ಯಾರ್ಥಿನಿಯನ್ನು ಆಯ್ಕೆ ಮಾಡಿ ಇದೇ ಕಾರ್ಯಕ್ರಮದಲ್ಲಿ ನೆನಪಿನ ಕಾಣಿಕೆ ನೀಡಿ ಪುರಸ್ಕರಿಸಲಾಯಿತು. 
ದಿನಾಂಕ 24-09-2021 ರಂದು ನಮ್ಮ ಶಾಲೆಯಲ್ಲಿ  ಹಿರಿಯ ತರಳಬಾಳು ಜಗದ್ಗುರು ಲಿಂಗೈಕ್ಯ ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳವರ 29ನೆಯ ಶ್ರದ್ಧಾಂಜಲಿ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ಸಮಾರಂಭದಲ್ಲಿ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಹಿರಿಯ ಜಗದ್ಗುರುಗಳ ಜೀವನ ಮತ್ತು ಸಾಧನೆಯ ಕುರಿತು ಮಾತನಾಡಿದರು.
ದಿನಾಂಕ 23-09-2021 ರಂದು ನಮ್ಮ ಶಾಲೆಯಲ್ಲಿ ರಾಷ್ಟ್ರೀಯ ಪೋಷಣಾ ಸಪ್ತಾಹವನ್ನು ಹಮ್ಮಿಕೊಳ್ಳಲಾಗಿತ್ತು ಕಾರ್ಯಕ್ರಮದಲ್ಲಿ ಚನ್ನಗಿರಿಯ ಅಕ್ಷರ ದಾಸೋಹ ಸಹಾಯಕ ನಿರ್ದೇಶಕರಾದ ಶ್ರೀಯುತ ಲಿಂಗಪ್ಪನವರು ಭಾಗವಹಿಸಿ ಮಕ್ಕಳಿಗೆ ಪೋಷಣಾ ಸಪ್ತಾಹದ ಉದ್ದೇಶ ಮತ್ತು ಆಹಾರ ಪದ್ದತಿಯ ಕುರಿತು ಮಾಹಿತಿ ನೀಡಿದರು

ರಾಷ್ಟ್ರೀಯ ಪೋಷಣಾ ಸಪ್ತಾಹದ ಸಂದರ್ಭದಲ್ಲಿ ಮಕ್ಕಳು ವಿವಿಧ ಆಹಾರ ಧಾನ್ಯಗಳು ಮತ್ತು ತರಕಾರಿಗಳನ್ನು ಬಳಸಿ ಮಾನವನ ದೇಹದ ವಿವಿಧ ಅಂಗಾಂಗಗಳ ಚಿತ್ರ ರಚಿಸಿದ್ದು ಆಕರ್ಶಕವಾಗಿತ್ತು
ದಿನಾಂಕ 27-08-2021 ರಂದು  ವಿದ್ಯಾರ್ಥಿಗಳಿಗೆ ಇಲಾಖೆಯಿಂದ ಸರಬರಾಜಾಗಿದ್ದ ಉಚಿತ ಪಠ್ಯಪುಸ್ತಕಗಳನ್ನು ವಿತರಣೆ ಮಾಡಲಾಯಿತು
ಶಾಲೆಯನ್ನು ಸಂಪೂರ್ಣ ಸ್ಯಾನಿಟೈಸ್‌ ಮಾಡುತ್ತಿರುವುದು
ದಿನಾಂಕ 15-08-2021 ರಂದು ನಮ್ಮ ಶಾಲೆಯಲ್ಲಿ ಸ್ವಾತಂತ್ರ್ಯ ದಿನಾಚರಣೆ ಆಚರಿಸಲಾಯ್ತು ಶಾಲಾ ಸ್ಥಳೀಯ ಸಲಹಾ ಸಮಿತಿಯ ಅಧ್ಯಕ್ಷರಾದ ಕೆ ಶಿವಲಿಂಗಪ್ಪನವರು ದ್ವಜಾರೋಹಣ ನೆರವೇರಿಸಿ ಮಾತನಾಡಿದರು


Friday, September 17, 2021

ವಿಶ್ವ ಓಝೋನ್ ದಿನಾಚರಣೆ

ದಿನಾಂಕ 16-09-2021 ರಂದು ವಿಶ್ವ ಓಝೋನ್ ದಿನಾಚರಣೆಯನ್ನು ಆಚರಿಸಲಾಯಿತು, ವಿಜ್ಞಾನ ಶಿಕ್ಷಕರಾದ ಡಿ ಯೋಗೇಂದ್ರಪ್ಪರವರು ಮಕ್ಕಳಿಗೆ ಓಝೋನ್ ಪದರದ ಕುರಿತು ವಿವರಿಸಿದರು

 

Sunday, September 5, 2021

ಶಿಕ್ಷಕರ ದಿನಾಚರಣೆ 05-09-2021

 



ದಿನಾಂಕ : 05-09-2021 ರಂದು ಸಹಾಯಕ ಕೃಷಿ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗ, ರೈತ ಸಂಪರ್ಕ ಕೇಂದ್ರ ಪಾಂಡೋಮಟ್ಟಿ ಮತ್ತು ಶ್ರೀ ರುದ್ರೇಶ್ವರ ಪ್ರೌಢಶಾಲೆಯ ಸಂಯುಕ್ತ ಆಶ್ರಯದಲ್ಲಿ "ಮುಖ್ಯಮಂತ್ರಿ ರೈತ ವಿದ್ಯಾ ನಿಧಿ" ಲೋಕಾರ್ಪಣೆ ಕಾರ್ಯಕ್ರಮದ ನೇರಪ್ರಸಾರವನ್ನು ನಮ್ಮ ಶಾಲೆಯ ಶ್ರೀ ಶಿವಕುಮಾರ ರಂಗಮಂದಿರದಲ್ಲಿ ಆಯೋಜಿಸಲಾಗಿತ್ತು.

Tuesday, August 31, 2021

ಶಾಲಾ ಪ್ರಾರಂಭೋತ್ಸವ 23-08-2021

ಶಾಲಾ ಆವರಣ ಸ್ವಚ್ಚಗೊಳಿಸಿರುವುದು

ಸಾಮಾಜಿಕ ಅಂತರ ಕಾಪಾಡಿಕೊಳ್ಳಲು ಚೌಕಗಳನ್ನು ಹಾಕಿರುವುದು

ಥರ್ಮಲ್‌ ಸ್ಕ್ಯಾನಿಂಗ್ , ಸ್ಯಾನಿಟೈಸ್‌ನೊಂದಿಗೆ ವಿದ್ಯಾರ್ಥಿಗಳಿಗೆ ಹೂ ನೀಡಿ ಸ್ವಾಗತಿಸಲಾಯಿತು

ವಿದ್ಯಾರ್ಥಿಗಳಂದ ಒಪ್ಪಿಗೆ ಪತ್ರ ಪಡೆದುಕೊಳ್ಳುತ್ತಿರುವುದು

ಸಾಮಾಜಿಕ ಅಂತರದೊಂದಿಗೆ ತರಗತಿ ಕೋಣೆಯಲ್ಲಿ ವಿದ್ಯಾರ್ಥಿಗಳು

 

Wednesday, April 14, 2021

ಡಾ. ಬಿ.ಆರ್ ಅಂಬೇಡ್ಕರ್ ಜಯಂತಿ 14-04-2021

ಇಂದು ನಮ್ಮ ಶಾಲೆಯಲ್ಲಿ ಡಾ. ಬಿ.ಆರ್ ಅಂಬೇಡ್ಕರ್ ರವರ 130ನೇ ಜಯಂತಿಯನ್ನು ಆಚರಿಸಲಾಯಿತು.

Monday, April 5, 2021

ಬಾಬು ಜಗಜೀವನ್ ರಾಮ್ ರವರ ಜಯಂತಿ ಆಚರಣೆ 05-04-2021

 

ಇಂದು ನಮ್ಮ ಶಾಲೆಯಲ್ಲಿ ಬಾಬು ಜಗಜೀವನ್ ರಾಮ್ ರವರ 114 ನೇ ಜಯಂತಿಯನ್ನು ಆಚರಿಸಲಾಯಿತು.


Monday, March 8, 2021

ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ 08-03-2021

 

ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ 03-03-2021 


ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಸಂದರ್ಭದಲ್ಲಿ ಗೊಪ್ಪೇನಹಳ್ಳಿಯ ಸರ್ಕಾರಿ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲರಾದ ಶ್ರೀಮತಿ ಜಿ ಶಾರದ ಉಪನ್ಯಾಸ ನೀಡಿದರು. ಈ ಸಂದರ್ಭದಲ್ಲಿ ಅವರನ್ನು ಶಾಲೆಯ ಪರವಾಗಿ ಆತ್ಮೀಯವಾಗಿ ಸನ್ಮಾನಿಸಲಾಯಿತು

ರಾಷ್ಟ್ರೀಯ ವಿಜ್ಞಾನ ದಿನಾಚರಣೆ 28-02-2021

 

ರಾಷ್ತ್ರೀಯ ವಿಜ್ಞಾನ ದಿನಾಚರಣೆ ಅಂಗವಾಗಿ ನಮ್ಮ ಶಾಲೆಯ ವಿಜ್ಞಾನ ಶಿಕ್ಷಕರಾದ ಶ್ರೀ ಡಿ ಯೋಗೇಂದ್ರಪ್ಪ ಇವರು ಮಕ್ಕಳಿಗೆ ವಿಜ್ಞಾನ ಪ್ರಯೋಗಗಳನ್ನು ಮಾಡಿ ತೋರಿಸುವ ಮೂಲಕ ಮಕ್ಕಳಲ್ಲಿ ವಿಜ್ಞಾನದ ಬಗೆಗೆ ಕುತೂಲಹ ಮೂಡಿಸಿದರು.

ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಅಂಗವಾಗಿ ವಿದ್ಯಾರ್ಥಿಗಳು ಶಾಲಾ ಆವರಣದಲ್ಲಿ ವಿಜ್ಞಾನ ಪಠ್ಯಪುಸ್ತಕದಲ್ಲಿ ಬರುವ ಚಿತ್ರಗಳ ರಂಗೋಲಿ ಹಾಕಿದ್ದು ಆಕರ್ಷಕವಾಗಿತ್ತು.