ಶಾಲಾ ಬ್ಲಾಗ್ ನ ಉದ್ಘಾಟನಾ ದಿನಾಂಕ: 15-08-2020

Friday, November 26, 2021

ಸಂವಿಧಾನ ದಿನ ಮತ್ತು ವಿದ್ಯಾರ್ಥಿ ಸಂಘದ ಉದ್ಘಾಟನೆ

ದಿನಾಂಕ 26-11-2021 ರಂದು ಸಂವಿಧಾನ ದಿವನ್ನು ಆಚರಿಸಲಾಯಿತು. ಅಂದು ಮಕ್ಕಳಿಗೆ ಸಂವಿಧಾನದ ಪ್ರಸ್ತಾವನೆಯನ್ನು  ಹೇಳಿಕೊಡಲಾಯಿತು. ಮಕ್ಕಳು ಮತ್ತು ಶಿಕ್ಷಕರು ಸಂವಿಧಾನ ದಿನದ ಕುರಿತು ಮಾತನಾಡಿದರು. ಮುಖ್ಯಶಿಕ್ಷಕರಾದ ಟಿ ಧನಂಜಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

2021-22 ನೇ ಸಾಲಿನ ಶಾಲಾ ಸಂಸತ್ತು ಚುನಾವಣೆಯಲ್ಲಿ ಆಯ್ಕೆಯಾದ ಅಭ್ಯರ್ಥಿಗಳಿಗೆ ಶಾಲಾ ಸಂಸತ್ತಿನ ರಾಷ್ಟ್ರಪತಿಗಳಾದ ಟಿ ಧನಂಜಯರವರು ವಿವಿಧ ಖಾತೆಗಳಿಗೆ ಆಯ್ಕೆಯಾದ ಮಂತ್ರಿಗಳಿಗೆ ಪ್ರಮಾಣ ವಚನ ಬೋಧಿಸಿದರು

2021-22 ನೇ ಸಾಲಿನ ವಿದ್ಯಾರ್ಥಿ ಸಂಘದ ಉದ್ಘಾಟನಾ ಸಮಾರಂಭವನ್ನು ಹಮ್ಮಿಕೊಳ್ಳಲಾಗಿತ್ತು. ವಿದ್ಯಾರ್ಥಿ ಸಂಘದ ವತಿಯಿಂದ ಮಕ್ಕಳಿಗೆ ಸಹಿ ಊಟದ ವ್ಯವಸ್ಥೆ ಮಾಡಲಾಗಿತ್ತು.

 

Thursday, November 25, 2021

ಜಂತುಹುಳು ನಿವಾರಣಾ ಜಾಗೃತಿ ಮತ್ತು ಅಲ್ಬೆಂಡೋಜೋಲ್ ಮಾತ್ರೆ ವಿತರಣೆ

ದಿನಾಂಕ 25-11-2021 ರಂದು ನಮ್ಮ ಶಾಲೆಯಲ್ಲಿ ಗೊಪ್ಪೇನಹಳ್ಳಿ ಆರೋಗ್ಯ ಕೇಂದ್ರದ ವತಿಯಿಂದ ಮಕ್ಕಳಿಗೆ ಜಂತು ಹುಳು ನಿವಾರಣೆ ಕುರಿತು ಜಾಗೃತಿ ಮಾಡಿಸಲಾಯಿತು. ಇದೇ ಸಂದರ್ಭದಲ್ಲಿ ಎಲ್ಲ ಮಕ್ಕಳಿಗೆ ಜಂತು ಹುಳು ನಿವಾರಣೆಯ ಮಾತ್ರೆಗಳನ್ನು ಸಾಮೂಹಿಕವಾಗಿ ವಿತರಿಸಲಾಯಿತು...



 

Monday, November 22, 2021

ಕನಕದಾಸ ಜಯಂತಿ

ದಿನಾಂಕ 22-11-2021 ರಂದು ನಮ್ಮ ಶಾಲೆಯಲ್ಲಿ ದಾಸಶ್ರೇಷ್ಟ ಕನಕದಾಸರ ಜಯಂತಿಯನ್ನು ಆಚರಿಸಲಾಯಿತು


ನಮ್ಮ ಶಾಲೆಯ ಸ್ಥಳೀಯ ಸಲಹಾ ಸಮಿತಿಯ ಸದಸ್ಯರಾಗಿದ್ದ ವಡ್ನಾಳ್ ಗ್ರಾಮದ ಶರಣ ಬಿ ಜಯಪ್ಪನವರು  ದಿನಾಂಕ  16-11-2021 ರ ಮಂಗಳವಾರ ಅನಾರೋಗ್ಯದಿಂದ ನಿಧನರಾದರು. ಇವರ ನಿಧನಕ್ಕೆ ಶಾಲಾ ಸ್ಥಳೀಯ ಸಲಹಾ ಸಮಿತಿಯವರು, ಮುಖ್ಯೋಪಾಧ್ಯಾಯರು ಮತ್ತು ಸಿಬ್ಬಂದಿ ವರ್ಗದವರು ಸಂತಾಪ ಸೂಚಿಸಿ ಮೃತರ ಆತ್ಮಕ್ಕೆ ಚಿರಶಾಂತಿ ದೊರೆಯಲೆಂದು ಪ್ರಾರ್ಥಿಸಿದರು.

Saturday, November 13, 2021

ಪೋಷಕರ ಸಭೆ

ಇಂದು ನಮ್ಮ ಶಾಲೆಯಲ್ಲಿ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳ ಪೋಷಕರ ಸಭೆ ಆಯೋಜಿಸಲಾಗಿತ್ತು. ಸಭೆಯಲ್ಲಿ ಮಕ್ಕಳ ಶೈಕ್ಷಣಿಕ ಪ್ರಗತಿಯ ಕುರಿತು ಚರ್ಚಿಸಲಾಯಿತು.

 

Friday, November 12, 2021

ಕಾನೂನು ಅರಿವು-ನೆರವು ಕಾರ್ಯಕ್ರಮ

ದಿನಾಂಕ : 12-11-2021 ರಂದು ನಮ್ಮ ಶಾಲೆಯಲ್ಲಿ ಭಾರತದ ಸ್ವಾತಂತ್ರ್ಯದ 75 ನೇ ಅಜಾದ್‌ ಕಾ ಅಮೃತ್‌ ಮಹೋತ್ಸವ ಆಚರಣೆ ಪ್ರಯುಕ್ತ ಕಾನೂನು ಅರಿವು-ನೆರವು ಕಾರ್ಯಕ್ರಮವನ್ನು ತಾಲ್ಲೂಕು ಕಾನೂನು ಸೇವಾ ಸಮಿತಿ ಚನ್ನಗಿರಿ, ವಕೀಲರ ಸಂಘ ಚನ್ನಗಿರಿ ಹಾಗೂ ವಿವಿಧ ಸರ್ಕಾರಿ ಇಲಾಖೆಗಳ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿತ್ತು. ಈ ಸಂದರ್ಭದಲ್ಲಿ ಚನ್ನಗಿರಿ ತಾಲ್ಲೂಕು ಕೋರ್ಟ್‌ನ ಸಿವಿಲ್‌ ನ್ಯಾಯಾಧೀಶರಾದ ಶ್ರೀಮತಿ ಕನ್ನಿಕ ಮೇಡಂ,ಸರ್ಕಾರಿ ಅಭಿಯೋಜಕರಾದ ಸರಿತಾ ಮೇಡಂ, ಪ್ರಾದೇಶಿಕ ಸಾರಿಗೆ ಅಧಿಕಾರಿಗಳಾದ ಮಹಮ್ಮದ್‌ ಕಾಲಿದ್ ಸರ್‌, ಚನ್ನಗಿರಿ ಉಪ ನಿರೀಕ್ಷಕರಾದ ಚಂದ್ರಶೇಖರ್‌ ಸರ್‌, ವಕೀಲರ ಸಂಘದ ಅಧ್ಯಕ್ಷರಾದ ರುದ್ರಪ್ಪನವರು ಸಮಾರಂಭದಲ್ಲಿ ಹಾಜರಿದ್ದರು. ಈ ಸಮಾರಂಭವನ್ನು ಪ್ರಾದೇಶಿಕ ಸಾರಿಗೆ ಅಧಿಕಾರಿಗಳಾದ ಮಹಮ್ಮದ್‌ ಕಾಲಿದ್ ಸರ್‌ ಉದ್ಘಾಟಿಸಿದರೆ ಶಾಲಾ ಮುಖ್ಯೋಪಾಧ್ಯಾಯರಾದ ಧನಂಜಯ ಸರ್‌ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಮಕ್ಕಳಿಗೆ ಕಾನೂನಿನ ಬಗ್ಗೆ ಅರಿವು ಮೂಡಿಸಲಾಯಿತು...






Monday, November 8, 2021

ಮಾತಾಡ್‌ ಮಾತಾಡ್‌ ಕನ್ನಡ


ದಿನಾಂಕ 28-10-2021 ರಂದು ಮಾತಾಡ್‌ ಮಾತಾಡ್‌ ಕನ್ನಡ ಕಾರ್ಯಕ್ರಮದ ಅಂಗವಾಗಿ ಕನ್ನಡ ತಾಯಿ ಭುವನೇಶ್ವರಿ ಪೋಟೋ ಜೊತೆಗೆ ಕನ್ನಡ ಘೋಷಣೆಗಳನ್ನು ಹಿಡಿದು ಊರಿನಲ್ಲಿ ಜಾಥಾ ನಡೆಸಲಾಯಿತಿ. ನಂತರ ಶಾಲಾ ರಂಗಮಂದಿರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮೂರು ಕನ್ನಡ ಹಾಡುಗಳನ್ನು ಸಾಮೂಹಿಕವಾಗಿ ಹಾಡಲಾಯಿತು.

ದಿನಾಂಕ 21-10-2021 ರಿಂದ ರಾಜ್ಯ ಸರ್ಕಾರದ ಆದೇಶದಂತೆ ಅಕ್ಷರ ದಾಸೋಹ ಯೋಜನೆಯ ಅಡಿಯಲ್ಲಿ ಮದ್ಯಾಹ್ನದ ಬಿಸಿಯೂಟವನ್ನು ಪುನರಾರಂಭ ಮಾಡಲಾಯಿತು. ಅಂದು ಮಕ್ಕಳಿಗೆ ಸಿಹಿ ಊಟ ನೀಡಲಾಯಿತು. ಶಾಲೆಯ ಎಲ್ಲ ಸಿಬ್ಬಂದಿ ವರ್ಗದವರು ಹಾಜರಿದ್ದರು


ದಿನಾಂಕ 14-10-2021 ರಂದು ನಮ್ಮ ಶಾಲೆಯ ಸ್ಥಳೀಯ ಸಲಹಾ ಸಮಿತಿಯ ಅಧ್ಯಕ್ಷರಾಗಿದ್ದ ಶರಣ ಕೆ ಶಿವಲಿಂಗಪ್ಪನವರು, ಕಂಚಿಗನಹಾಳ್‌ ಇವರು ಕಡಿಮೆ ರಕ್ತದೊತ್ತಡ (Low BP) ದಿಂದ ಲಿಂಗೈಕ್ಯರಾಗಿರುತ್ತಾರೆ. ಇವರು ಚನ್ನಗಿರಿ ಸಾದು ವೀರಶೈವ ಸಮಾಜದ ಅಧ್ಯಕ್ಷರೂ ಆಗಿದ್ದರು. ಇವರ ಅನಿರೀಕ್ಷಿತ ನಿಧನಕ್ಕೆ ಶಾಲಾ ಸ್ಥಳೀಯ ಸಲಹಾ ಸಮಿತಿಯ ಎಲ್ಲ ಸದಸ್ಯರು, ಮುಖ್ಯೋಪಾಧ್ಯಾಯರು ಮತ್ತು ಸಿಬ್ಬಂದಿ ವರ್ಗದವರು ಸಂತಾಪ ಸೂಚಿಸಿರುತ್ತಾರೆ.

ದಿನಾಂಕ 02-10-2021 ರಂದು ನಮ್ಮ ಶಾಲೆಯಲ್ಲಿ ಗಾಂಧೀ ಜಯಂತಿ, ಲಾಲ್‌ ಬಹದ್ದೂರ್‌ ಶಾಸ್ತ್ರಿ ಮತ್ತು ಶ್ರೀ ಶಿವಕುಮಾರ ಶಿವಾಚಾರ್ಯ ಸ್ವಾಮಿಗಳವರ 29ನೆಯ ಶ್ರದ್ಧಾಂಜಲಿ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು

ನಮ್ಮ ಶಾಲೆಯಲ್ಲಿ  2020-21 ನೇ ಸಾಲಿನ ಅತ್ಯುತ್ತಮ ವಿದ್ಯಾರ್ಥಿ ಮತ್ತು ಅತ್ಯುತ್ತಮ ವಿದ್ಯಾರ್ಥಿನಿಯನ್ನು ಆಯ್ಕೆ ಮಾಡಿ ಇದೇ ಕಾರ್ಯಕ್ರಮದಲ್ಲಿ ನೆನಪಿನ ಕಾಣಿಕೆ ನೀಡಿ ಪುರಸ್ಕರಿಸಲಾಯಿತು. 
ದಿನಾಂಕ 24-09-2021 ರಂದು ನಮ್ಮ ಶಾಲೆಯಲ್ಲಿ  ಹಿರಿಯ ತರಳಬಾಳು ಜಗದ್ಗುರು ಲಿಂಗೈಕ್ಯ ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳವರ 29ನೆಯ ಶ್ರದ್ಧಾಂಜಲಿ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ಸಮಾರಂಭದಲ್ಲಿ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಹಿರಿಯ ಜಗದ್ಗುರುಗಳ ಜೀವನ ಮತ್ತು ಸಾಧನೆಯ ಕುರಿತು ಮಾತನಾಡಿದರು.
ದಿನಾಂಕ 23-09-2021 ರಂದು ನಮ್ಮ ಶಾಲೆಯಲ್ಲಿ ರಾಷ್ಟ್ರೀಯ ಪೋಷಣಾ ಸಪ್ತಾಹವನ್ನು ಹಮ್ಮಿಕೊಳ್ಳಲಾಗಿತ್ತು ಕಾರ್ಯಕ್ರಮದಲ್ಲಿ ಚನ್ನಗಿರಿಯ ಅಕ್ಷರ ದಾಸೋಹ ಸಹಾಯಕ ನಿರ್ದೇಶಕರಾದ ಶ್ರೀಯುತ ಲಿಂಗಪ್ಪನವರು ಭಾಗವಹಿಸಿ ಮಕ್ಕಳಿಗೆ ಪೋಷಣಾ ಸಪ್ತಾಹದ ಉದ್ದೇಶ ಮತ್ತು ಆಹಾರ ಪದ್ದತಿಯ ಕುರಿತು ಮಾಹಿತಿ ನೀಡಿದರು

ರಾಷ್ಟ್ರೀಯ ಪೋಷಣಾ ಸಪ್ತಾಹದ ಸಂದರ್ಭದಲ್ಲಿ ಮಕ್ಕಳು ವಿವಿಧ ಆಹಾರ ಧಾನ್ಯಗಳು ಮತ್ತು ತರಕಾರಿಗಳನ್ನು ಬಳಸಿ ಮಾನವನ ದೇಹದ ವಿವಿಧ ಅಂಗಾಂಗಗಳ ಚಿತ್ರ ರಚಿಸಿದ್ದು ಆಕರ್ಶಕವಾಗಿತ್ತು
ದಿನಾಂಕ 27-08-2021 ರಂದು  ವಿದ್ಯಾರ್ಥಿಗಳಿಗೆ ಇಲಾಖೆಯಿಂದ ಸರಬರಾಜಾಗಿದ್ದ ಉಚಿತ ಪಠ್ಯಪುಸ್ತಕಗಳನ್ನು ವಿತರಣೆ ಮಾಡಲಾಯಿತು
ಶಾಲೆಯನ್ನು ಸಂಪೂರ್ಣ ಸ್ಯಾನಿಟೈಸ್‌ ಮಾಡುತ್ತಿರುವುದು
ದಿನಾಂಕ 15-08-2021 ರಂದು ನಮ್ಮ ಶಾಲೆಯಲ್ಲಿ ಸ್ವಾತಂತ್ರ್ಯ ದಿನಾಚರಣೆ ಆಚರಿಸಲಾಯ್ತು ಶಾಲಾ ಸ್ಥಳೀಯ ಸಲಹಾ ಸಮಿತಿಯ ಅಧ್ಯಕ್ಷರಾದ ಕೆ ಶಿವಲಿಂಗಪ್ಪನವರು ದ್ವಜಾರೋಹಣ ನೆರವೇರಿಸಿ ಮಾತನಾಡಿದರು