ಶಾಲಾ ಬ್ಲಾಗ್ ನ ಉದ್ಘಾಟನಾ ದಿನಾಂಕ: 15-08-2020

Friday, December 31, 2021

2021-22 ನೇ ಸಾಲಿನ ಶಾಲಾ ಸಂಸತ್ತಿನ ಬಜೆಟ್ ಮಂಡನೆ

ಇಂದು ನಮ್ಮ ಶಾಲೆಯಲ್ಲಿ 2021-22 ನೇ ಸಾಲಿನ ಶಾಲಾ ಸಂಸತ್ತಿನ ಬಜೆಟ್ ನ್ನು ಶಾಲಾ ಸಂಸತ್ತಿನ ಹಣಕಾಸು ಮಂತ್ರಿಯಾದ ಕುಮಾರಿ ಹರ್ಷಿತ 9ನೇ ತರಗತಿ ಇವರು ಎಲ್ಲರ ಸಮ್ಮುಖದಲ್ಲಿ ಮಂಡಿಸಿದರು. ನಂತರ ಬಜೆಟ್ ಬಗೆಗೆ ಚರ್ಚೆಗೆ ಅವಕಾಶ ನೀಡಿ ಹಾಜರಿದ್ದ ಎಲ್ಲ ವಿದ್ಯಾರ್ಥಿಗಳ ಒಪ್ಪಗೆಯ ಮೇರೆಗೆ ಸಹಿಗಾಗಿ ರಾಷ್ಟ್ರಪತಿಗಳಿಗೆ ಸಲ್ಲಿಸಲಾಯಿತು. ರಾಷ್ಟ್ರಪತಿಗಳಾದ ಮುಖ್ಯಶಿಕ್ಷಕ ಟಿ ಧನಂಜಯ ಬಜೆಟ್ ಪ್ರತಿಗೆ ಸಹಿ ಹಾಕುವುದರೊಂದಿಗೆ ಅನುಮೋದನೆ  ನೀಡಿದರು. 

 

Thursday, December 30, 2021

ಪೋಷಕರ ಸಭೆ

ದಿನಾಂಕ 30-12-2021 ರಂದು ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿ ಬಗ್ಗೆ ಚರ್ಚಿಸಲು ಪೋಷಕರ ಸಭೆ ಕರೆಯಲಾಗಿತ್ತು. ಸಭೆಯಲ್ಲಿ ವಿದ್ಯಾರ್ಥಿಗಳ 3 ನೇ ರೂಪಣಾತ್ಮಕ ಪರೀಕ್ಷೆಯಲ್ಲಿ ಪಡೆದ ಅಂಕಗಳ ಕುರಿತು ಚರ್ಚಿಸಲಾಯಿತು. ಉತ್ತರ ಪತ್ರಿಕೆಗಳನ್ನು ಪೋಷಕರಿಗೆ ನೀಡಿ ಮಕ್ಕಳು ಇನ್ನೂ ಹೆಚ್ಚಿನ ಅಂಕಗಳಿಸಲು ಶಿಕ್ಷಕರೊಂದಿಗೆ ಪೋಷಕರೂ ಮನೆಗಳಲ್ಲಿ ಓದಲು ಉತ್ತೇಜನ ನೀಡುವಂತೆ ಮನವೊಲಿಸಲಾಯ್ತು....

 

Thursday, December 23, 2021

ರಾಷ್ಟ್ರೀಯ ಗಣಿತ ದಿನ 22-12-2021

ದಿನಾಂಕ 22-12-2021 ರಂದು  ಬೆಳಗಿನ ಪ್ರಾರ್ಥನೆಯ ನಂತರ ರಾಷ್ಟ್ರೀಯ ಗಣಿತ ದಿನದ ಅಂಗವಾಗಿ ಶ್ರೀನಿವಾಸ ರಾಮಾನುಜನ್ ಕುರಿತು ನಮ್ಮ ಶಾಲೆಯ ಗಣಿತ ಶಿಕ್ಷಕರಾದ ಕೆ ಶಿವಕುಮಾರ್ ಮಕ್ಕಳಿಗೆ ಉಪನ್ಯಾಸ ನೀಡಿದರು

 

Saturday, December 18, 2021

ವಾಲಿಬಾಲ್ ಕ್ರೀಡಾಕೂಟ

 

ಇಂದು ನಮ್ಮ ಶಾಲೆಯ ವಿದ್ಯಾರ್ಥಿಗಳಿಗೆ ವಾಲಿಬಾಲ್ ಕ್ರೀಡಾಕೂಟ ಏರ್ಪಡಿಸಲಾಗಿತ್ತು. ಬಹು ದಿನಗಳ ನಂತರ ಆಯೋಜಿಸಿದ್ದ ಈ ವಾಲಿಬಾಲ್ ಕ್ರೀಡಾಕೂಟದಲ್ಲಿ 4 ತಂಡಗಳು ಬಹಳ ಉತ್ಸಾಹದಿಂದ ಪಾಲ್ಗೊಂಡರು, ಶಿಕ್ಷಕರು ಮತ್ತು ಉಳಿದ ವಿದ್ಯಾರ್ಥಿಗಳು ಕ್ರೀಡಾಕೂಟದಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಿದರು. ಮುಖ್ಯಶಿಕ್ಷಕರಾದ ಟಿ ಧನಂಜಯ ಕ್ರೀಡಾಕೂಟವನ್ನು ಉದ್ಘಾಟಿಸಿದರೆ ದೈಹಿಕ ಶಿಕ್ಷಣ ಶಿಕ್ಷಕರಾದ ಆರ್ ಗಿರೀಶ್ ಕ್ರೀಡಾಕೂಟ ನಡೆಸಿಕೊಟ್ಟರು. ಎಲ್ಲಾ ಶಿಕ್ಷಕರು ಇದರಲ್ಲಿ ಭಾಗವಹಿಸಿ ಕೊನೆಗೆ ಸ್ವತಃ ಶಿಕ್ಷಕರೂ ಒಂದು ಮ್ಯಾಚ್ ಆಡಿ ಮಕ್ಕಳನ್ನು ರಂಜಿಸಿದ್ದು ವಿಶೇಷವಾಗಿತ್ತು.

Friday, December 10, 2021

ವಿಶ್ವ ಮಾನವ ಹಕ್ಕುಗಳ ದಿನಾಚರಣೆ 10-12-2021

ಇಂದು ನಮ್ಮ ಶಾಲೆಯಲ್ಲಿ ಮಾನವ ಹಕ್ಕುಗಳ ದಿನಾಚರಣೆಯನ್ನು ಆಚರಿಸಲಾಯಿತು. ಈ ಕುರಿತು ಶಿಕ್ಷಕರಾದ ವಿ ಕೆ ಶಾಂತಕುಮಾರ ಮಾತನಾಡಿ ಮಾನವ ಹಕ್ಕುಗಳ ಅಗತ್ಯತೆ ಮತ್ತು ಮಾನವ ಹಕ್ಕುಗಳ ಆಯೋಗದ ಕುರಿತು ತಿಳಿಸಿಕೊಟ್ಟರು...

Saturday, December 4, 2021

ಶಾಲಾ ಸಂಸತ್ತಿನ ಮೊದಲ ಸಚಿವ ಸಂಪುಟ ಸಭೆ, ಹಂಚಿಕೆಯಾದ ಖಾತೆಗಳ ಜವಾಬ್ದಾರಿ ನಿರ್ವಹಣೆ ಕುರಿತು ಚರ್ಚೆ

ಇಂದು ನಮ್ಮ ಶಾಲೆಯ ಶಾಲಾ ಸಂಸತ್ತಿನ ಮೊದಲ ಸಚಿವ ಸಂಪುಟ ಸಭೆಯನ್ನು ಆಯೋಜಿಸಲಾಗಿತ್ತು. ಪ್ರಧಾನ ಮಂತ್ರಿಯನ್ನು ಒಳಗೊಂಡಂತೆ ಸಚಿವ ಸಂಪುಟದ ಎಲ್ಲ ಸಚಿವರೂ ಹಾಜರಾಗಿದ್ದರು. 

 
ಶಿಕ್ಷಕರು ಸಭೆಯಲ್ಲಿ ಈಗಾಗಲೇ ಸಚಿವರಿಗೆ ಹಂಚಿಕೆಯಾಗಿರುವ ಖಾತೆಗಳ ಜವಾಬ್ದಾರಿಗಳನ್ನು ಹಂಚಿಕೆ ಮಾಡಿ ಅವರು ನಿರ್ವಹಿಸಬೇಕಾದ ಕಾರ್ಯಗಳನ್ನು ತಿಳಿಸಿ ಅದರ ಬಗೆಗೆ ಚರ್ಚಿಸಿ ಮಾರ್ಗದರ್ಶನ ಮಾಡಲಾಯಿತು. ಪ್ರತಿಯೊಬ್ಬ ಸಚಿವರಿಗೆ ಅವರಿಗೆ ವಹಿಸಿದ ಖಾತೆಗಳ ನಿರ್ವಹಣೆಗೆ ಸಲಹೆಗಾರರಾಗಿ ಒಬ್ಬರು ಶಿಕ್ಷಕರು ಮತ್ತು 8-10 ವಿದ್ಯಾರ್ಥಿಗಳನ್ನು ಒಳಗೊಂಡ ತಂಡವನ್ನು ರಚಿಸಿಕೊಡಲಾಗುವುದು, ಅವರ ಸಹಕಾರದೊಂದಿಗೆ ತಮ್ಮ ತಮ್ಮ ಖಾತೆಗಳನ್ನು ಸಮರ್ಥವಾಗಿ ನಿರ್ವಹಿಸುವಂತೆ ತಿಳಿಸಲಾಯಿತು. ನೂತನ ಸಚಿವರುಗಳು ಬಹು ಉತ್ಸಹದಿಂದ ಚರ್ಚೆಯಲ್ಲಿ ಪಾಲ್ಗೊಂಡರು... 

ಅಕ್ಷರ ದಾಸೋಹ ಯೋಜನೆಯ ಆಹಾರ ಧಾನ್ಯಗಳನ್ನು ವಿತರಣೆ

ಇಂದು ನಮ್ಮ ಶಾಲೆಯಲ್ಲಿ ಅಕ್ಷರ ದಾಸೋಹ ಯೋಜನೆಯಡಿ ಸರಬರಾಜಾದ ಆಹಾರ ಧಾನ್ಯಗಳನ್ನು ವಿದ್ಯಾರ್ಥಿಗಳ ಪೋಷಕರನ್ನು ಶಾಲೆಗೆ ಕರೆಸಿ ವಿತರಿಸಲಾಯಿತು.

 

Wednesday, December 1, 2021

ಕ್ಷೀರಭಾಗ್ಯ ಯೋಜನೆಯ ಪುನರಾರಂಭ ಮತ್ತು ಏಡ್ಸ್ ದಿನಾಚರಣೆ 01-12-2021

ಇಂದು ನಮ್ಮ ಶಾಲೆಯಲ್ಲಿ ಮಕ್ಕಳಿಗೆ ಕೆನೆಭರಿತ ಬಿಸಿಹಾಲು ವಿತರಿಸುವ ಮೂಲಕ ಕ್ಷೀರಭಾಗ್ಯ ಯೋಜನೆಯನ್ನು ಪುನರಾರಂಭ ಮಾಡಲಾಯಿತು. ಈ ಸಂದರ್ಭದಲ್ಲಿ ಎಲ್ಲಾ ಶಿಕ್ಷಕರೂ ಹಾಜರಿದ್ದರು.

ಇಂದು ನಮ್ಮ ಶಾಲೆಯಲ್ಲಿ ವಿಶ್ವ ಏಡ್ಸ್ ದಿನಾಚರಣೆ ಕಾರ್ಯಕ್ರಮದಲ್ಲಿ ವಿಜ್ಞಾನ ಶಿಕ್ಷಕರಾದ ಡಿ ಯೋಗೇಂದ್ರಪ್ಪ ಏಡ್ಸ್ ದಿನಾಚರಣೆಯ ಹಿನ್ನೆಲೆ, ರೋಗ ಲಕ್ಷಣ, ಹೆಚ್.ಐ.ವಿ ವೈರಸ್ ಕುರಿತು ಮಾತನಾಡಿದರು 

ಶಿಕ್ಷಕರಾದ ಟಿ ಕೆ ಶಿವಕುಮಾರ್ ಏಡ್ಸ್ ಹರಡುವ ಬಗೆಯನ್ನು ವಿವರಿಸಿದರು. ಮುಖ್ಯಶಿಕ್ಷಕರಾದ ಟಿ. ಧನಂಜಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

 

ಶಾಲಾವಾಣಿ, ಮಾಸ ಪತ್ರಿಕೆ - ನವೆಂಬರ್ 2021

 'ಶಾಲಾವಾಣಿ' ಮಾಸ ಪತ್ರಿಕೆ- ನವೆಂಬರ್ 2021

 
ಇಂದು ನಮ್ಮ ಶಾಲೆಯ ಚೊಚ್ಚಲ ಮಾಸ ಪತ್ರಿಕೆ 'ಶಾಲಾವಾಣಿ' ಯನ್ನ ಶಾಲೆಯ ಮುಖ್ಯೋಪಾಧ್ಯಾಯರಾದ ಟಿ. ಧನಂಜಯ  ಬಿಡುಗಡೆ ಮಾಡಿದರು. ಇದು ಪ್ರತೀ ತಿಂಗಳು ಶಾಲೆಯಲ್ಲಿ ನಡೆದ ಚಟುವಟಿಕೆಗಳ ವರದಿ ಮತ್ತು ಮಕ್ಕಳ ಸೃಜನಶೀಲ ಬರಹಗಳಾದ ಕಥೆ, ಕವನ, ಡ್ರಾಯಿಂಗ್, ಲೇಖನ ಬರಹ, ಪ್ರಬಂಧ ಮುಂತಾದವುಗಳನ್ನು ಪ್ರಕಟಿಸಬೇಕೆಂಬ ಸದುದ್ದೇಶದಿಂದ ಹೊರಡಿಸಿದ ಪತ್ರಿಕೆಯಾಗಿದೆ....