ಶಾಲಾ ಬ್ಲಾಗ್ ನ ಉದ್ಘಾಟನಾ ದಿನಾಂಕ: 15-08-2020

Wednesday, January 26, 2022

73ನೇ ಗಣರಾಜ್ಯೋತ್ಸವದ ಶುಭಾಶಯಗಳು

ಇಂದು ಬೆಳಗ್ಗೆ 8:00 ಗಂಟೆಗೆ ಸರಿಯಾಗಿ ನಮ್ಮ ಶಾಲೆಯಲ್ಲಿ ಶಾಲಾ ಸ್ಥಳೀಯ ಸಲಹಾ ಸಮಿತಿಯ ಉಪಾಧ್ಯಕ್ಷರಾದ ಶರಣ ಕೆ.ಎಂ ಈಶ್ವರಪ್ಪನವರು ಧ್ವಜಾರೋಹಣವನ್ನು ನೆರವೇರಿಸುವದರೊಂದಿಗೆ 73 ನೇ ಗಣರಾಜ್ಯೋತ್ಸವನ್ನು ಆಚರಿಸಲಾಯಿತು. ಸ್ಥಳೀಯ ಸಲಹಾ ಸಮಿತಿಯ ಸದಸ್ಯರುಗಳು ಮತ್ತು ಮುಖ್ಯೋಪಾಧ್ಯಾಯರು ಹಾಗೂ ಸಿಬ್ಬಂದಿ ವರ್ಗದವರು ಹಾಜರಿದ್ದರು.


Tuesday, January 25, 2022

ರಾಷ್ಟ್ರೀಯ ಮತದಾರರ ದಿನಾಚರಣೆ 25-01-2022

 

ಇಂದು ನಮ್ಮ ಶಾಲೆಯಲ್ಲಿ ಬೆಳಗಿನ ಪ್ರಾರ್ಥನೆಯ ವೇಳೆಯಲ್ಲೇ ರಾಷ್ಟ್ರೀಯ ಮತದಾರರ ದಿನ ಆಚರಿಸಲಾಯಿತು. ಇದೇ ಸಂದರ್ಭದಲ್ಲಿ ಮತದಾರರ ಪ್ರತಿಜ್ಞಾ ವಿಧಿಯನ್ನು ಬೋಧಿಸಲಾಯಿತು. ಶಿಕ್ಷಕರಾದ ಬಿ ಜಿ ಪ್ರಕಾಶ್ ರಾಷ್ಟ್ರೀಯ ಮತದಾರರ ದಿನದ ಕುರಿತು ಮಾತನಾಡಿದರು. ಎಲ್ಲ ಶಿಕ್ಷಕರು ಹಾಜರಿದ್ದರು.

Wednesday, January 12, 2022

ರಾಷ್ಟ್ರೀಯ ಯುವ ದಿನಾಚರಣೆ 12-01-2022

 


ಇಂದು ನಮ್ಮ ಶಾಲೆಯಲ್ಲಿ ರಾಷ್ಟ್ರೀಯ ಯುವ ದಿನಾಚರಣೆಯನ್ನು ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಸ್ವಾಮಿ ವಿವೇಕಾನಂದರ ಜೀವನದ ಕುರಿತು ಮಾತನಾಡಿದರು. ಶಿಕ್ಷಕರಾದ ಬಿ ಜಿ ಪ್ರಕಾಶ್ ಮಾತನಾಡಿ ವಿವೇಕಾನಂದರ ಜೀವನ ಆದರ್ಶಗಳ ಕುರಿತು ಮಕ್ಕಳಿಗೆ ವಿವರವಾಗಿ ತಿಳಿಸಿದರು. ಮುಖ್ಯಶಿಕ್ಷಕಾದ ಟಿ ಧನಂಜಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಈ ಸಂದರ್ಭದಲ್ಲಿ ಶಾಲೆಯ ಎಲ್ಲಾ ಶಿಕ್ಷಕರು ಉಪಸ್ಥಿತರಿದ್ದರು.




Tuesday, January 11, 2022

ರೇಬಿಸ್ ಕುರಿತು ಜಾಗೃತ ಶಿಬಿರ

 

ಇಂದು ನಮ್ಮ ಶಾಲೆಯಲ್ಲಿ ಚನ್ನಗಿರಿ ತಾಲ್ಲೂಕು ಪಶು ವೈದ್ಯಕೀಯ ಕೇಂದ್ರದ ವತಿಯಿಂದ ರೇಬಿಸ್ (ಹುಚ್ಚು ನಾಯಿ ಕಡಿತದಿಂದ ಬರುವ ರೋಗ) ಕುರಿತು ಜಾಗೃತಿ ಶಿಬಿರ ನಡೆಸಲಾಯಿತು. ಕಾರ್ಯಕ್ರಮದಲ್ಲಿ ಮಾತನಾಡಿದ ಪಶು ವೈಧ್ಯಾಧಿಕಾರಿಗಳು ಮಕ್ಕಳಿಗೆ ರೇಬಿಸ್ ರೋಗಕ್ಕೆ ಕಾರಣ ಮತ್ತು ಅದು ಬರದಂತೆ ತಡೆಯಲು ವಹಿಸಬೇಕಾದ  ಮುನ್ನೆಚ್ಚರಿಕೆ ಕ್ರಮಗಳ ಕುರಿತು ಮಾಹಿತಿ ನೀಡಿದರು. ಎಲ್ಲಾ ಶಿಕ್ಷಕರು ಉಪಸ್ಥಿತರಿದ್ದರು.

Monday, January 3, 2022

ಕೋವ್ಯಾಕ್ಸಿನ್ ಲಸಿಕೆ ವಿತರಣೆ

ಗೊಪ್ಪೇನಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದಿಂದ ಇಂದು ನಮ್ಮ ಶಾಲೆಯ 15 ರಿಂದ 18 ವಯೋಮಾನದ 44 ಮಕ್ಕಳಿಗೆ ಕೋವ್ಯಾಕ್ಸಿನ್ ಲಸಿಕೆ ಹಾಕಲಾಯಿತು. ವಿದ್ಯಾರ್ಥಿಗಳು ಪೋಷಕರಿಂದ ಒಪ್ಪಿಗೆ ಪತ್ರ ಪಡೆದು ತಂದು ಲಸಿಕೆ ಹಾಕಿಸಿಕೊಂಡರು. 


ಸಾವಿತ್ರಿಬಾಯಿ ಪುಲೆ ಜಯಂತಿ

ಸಾವಿತ್ರಿಬಾಯಿ ಪುಲೆ