ಶಾಲಾ ಬ್ಲಾಗ್ ನ ಉದ್ಘಾಟನಾ ದಿನಾಂಕ: 15-08-2020

Monday, February 28, 2022

ರಾಷ್ಟ್ರೀಯ ವಿಜ್ಞಾನ ದಿನಾಚರಣೆ

ಸರ್ ಸಿ ವಿ ರಾಮನ್ ರವರ ಜನ್ಮದಿನವನ್ನು ರಾಷ್ಟ್ರೀಯ ವಿಜ್ಞಾನ ದಿನವನ್ನಾಗಿ ಇಂದು ಆಚರಿಸಲಾಯಿತು. ಶಾಲೆಯ  ವಿಜ್ಞಾನ ಶಿಕ್ಷಕರಾದ ಡಿ ಯೋಗೇಂದ್ರಪ್ಪ ಮತ್ತು ಟಿ ಕೆ ಶಿವಕುಮಾರ್ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳು ಹಲವಾರು ಪ್ರಯೋಗಗಳನ್ನು ಮಾಡಿ ವಿವರಿಸಿದರು. ಎಲ್ಲಾ ವಿದ್ಯಾರ್ಥಿಗಳು ಆಸಕ್ತಿಯಿಂದ ವೀಕ್ಷಿಸುತ್ತಿದ್ದರು... ಮುಖ್ಯಶಿಕ್ಷಕರಾದ ಟಿ ಧನಂಜಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಎಲ್ಲಾ ಶಿಕ್ಷಕರು ಕಾರ್ಯಕ್ರಮಕ್ಕೆ ಸಹಕರಿಸಿದರು. ಇಂದು ಎಲ್ಲರಿಗೂ ಸಿಹಿ ಊಟದ ವ್ಯವಸ್ಥೆ ಮಾಡಲಾಗಿತ್ತು. 

ರಾಷ್ಟ್ರೀಯ ವಿಜ್ಞಾನ ದಿನದಂದು ವಿದ್ಯಾರ್ಥಿಗಳ ರಂಗೋಲಿಯ ರಂಗಿನಲ್ಲಿ ಅರಳಿದ ವಿಜ್ಞಾನ ವಿಷಯದ ಚಿತ್ರಗಳು.


Sunday, February 27, 2022

ಕಲೋತ್ಸವ ಸ್ಪರ್ಧೆಯಲ್ಲಿ ಜಿಲ್ಲಾ ಮಟ್ಟಕ್ಕೆ ಆಯ್ಕೆ

ಶಾಲಾ ಮಟ್ಟದ ಕಲೋತ್ಸವ ಸ್ಪರ್ಧೆಯಲ್ಲಿ ಭಾಗವಹಿಸಿದ ಕುಶಾಲ್‌ ಪಿ ಕೆ. 10ನೇ ತರಗತಿ ವಿದ್ಯಾರ್ಥಿ ಜಾನಪದ ವಾದ್ಯ ಪ್ರಕಾರವಾದ ವೀರಗಾಸೆಯ ಸಮಾಳ ನುಡಿಸುವ ವೀಡಿಯೋವನ್ನು ಕಲೋತ್ಸವ 2021 ರ ವೆಬ್‌ಸೈಟ್‌ಗೆ ಅಪ್‌ಲೋಡ್‌ ಮಾಡಲಾಗಿತ್ತು. ಇದೀಗ  ಆ ವಿದ್ಯಾರ್ಥಿ ಜಿಲ್ಲಾ ಮಟ್ಟ ಕಲೋತ್ಸವ ಪಟ್ಟಿಯಲ್ಲಿ ಸ್ಥಾನ ಪಡೆದು ಶಾಲೆಗೆ ಕೀರ್ತಿ ತಂದಿರುತ್ತಾನೆ. ಶಾಲೆಯ ಶಿಕ್ಷಕರುಗಳು ಮತ್ತು ವಿದ್ಯಾರ್ಥಿಗಳು ಅಭಿನಂದನೆ ಸಲ್ಲಿಸಿರುತ್ತಾರೆ.

 


Friday, February 18, 2022

ಶಾಲಾ ವಿದ್ಯಾರ್ಥಿಗಳಿಗೆ ಮಾದಕ ವಸ್ತುವಿನ ನಿಯಂತ್ರಣ ಕುರಿತು ಒಂದು ದಿನದ ಜಾಗೃತಿ ಕಾರ್ಯಕ್ರಮ


ರಾಜ್ಯ ಮಟ್ಟದ ಸಮನ್ವಯ ಸಂಸ್ಥೆ ಕರ್ನಾಟಕ ಮತ್ತು ಶ್ರೀ ರುದ್ರೇಶ್ವರ ಪ್ರೌಢಶಾಲೆಯ ಸಹಯೋಗದೊಂದಿಗೆ ಮಾದಕ ವಸ್ತುಗಳ ನಿಯಂತ್ರಣ ಕುರಿತ ಒಂದು ದಿನದ ಜಾಗೃತಿ ಕಾರ್ಯಕ್ರಮವನ್ನು ಇಂದು ಆಯೋಜಿಸಲಾಗಿತ್ತು.


Friday, February 4, 2022

2021-22 ನೇ ಸಾಲಿನ ಸೆಪ್ಟಂಬರ್ ಮತ್ತು ಅಕ್ಟೋಬರ್ ತಿಂಗಳಿನ ಆಹಾರ ಸಾಮಗ್ರಿಗಳ ವಿತರಣೆ

ಇಂದು ನಮ್ಮ ಶಾಲೆಯಲ್ಲಿ 2021-22 ನೇ ಸಾಲಿನ ಸೆಪ್ಟೆಂಬರ್ ಮತ್ತು ಅಕ್ಟೋಬರ್ ತಿಂಗಳ ಆಹಾರ ಸಾಮಗ್ರಿಗಳನ್ನು ವಿದ್ಯಾರ್ಥಿಗಳ ಪೋಷಕರನ್ನು ಶಾಲೆಗೆ ಕರೆಸಿ ನಿಗದಿತ ನಮೂನೆಯಲ್ಲಿ ಸಹಿ ಪಡೆದು ವಿತರಿಸಲಾಯಿತು.

 

ಕುಷ್ಟರೋಗ ವಿರೋದಿ ಮಾಸಾಚರಣೆ

ಇಂದು ನಮ್ಮ ಶಾಲೆಯಲ್ಲಿ ಗೊಪ್ಪೇನಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದ ವತಿಯಿಂದ ಕುಷ್ಟರೋಗ ವಿರೋದಿ ಮಾಸಾಚರಣೆ ಕಾರ್ಯವನ್ನು ಆಯೋಜಿಸಲಾಗಿತ್ತು. ಆರೋಗ್ಯ ಸಿಬ್ಬಂದಿಗಳಾದ ವಿನಯ್ ರವರು ಕುಷ್ಟರೋಗದ ಲಕ್ಷಣಗಳು, ಅದರ ಪರಿಣಾಮಗಳು ಮತ್ತು ಬರದಂತೆ ತಡೆಯುವ ಮುನ್ನೆಚ್ಚರಿಕೆ ಕ್ರಮಗಳನ್ನು ತಿಳಿಸಿ ಹೇಳಿದರು. ಇನ್ನೋರ್ವ ಸಿಬ್ಬಂದಿಯಾದ ಅಶೋಕ್ ರವರು ಡೆಂಗ್ಯೂ ರೋಗದ ಲಕ್ಷಣಗಳು, ಹರಡುವ ವಿಧಾನ ಮತ್ತು ಮುನ್ನೆಚ್ಚರಿಕೆ ಕ್ರಮಗಳ ಕುರಿತಹ ಮಾಹಿತಿ ನೀಡಿದರು. 

 

ಕೋವ್ಯಾಕ್ಸಿನ್ ಎರಡನೇ ಡೋಸ್ ಲಸಿಕಾಕರಣ ಅಭಿಯಾನ

ಇಂದು ನಮ್ಮ ಶಾಲೆಯಲ್ಲಿ 15 ರಿಂದ 18 ವಯೋಮಾನದ ಮಕ್ಕಳಿಗೆ ಕೋವ್ಯಾಕ್ಸಿನ್ 2ನೇ ಡೋಸ್ ನ್ನು ನೀಡಲಾಯಿತು. ಗೊಪ್ಪೇನಹಳ್ಳಿಯ ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿಗಳು ಲಸಿಕಾಕರಣ ಅಭಿಯಾನವನ್ನು ಯಶಸ್ವಿಗೊಳಿಸಿದರು.