 |
ದಿನಾಂಕ 25-11-2021 ರಂದು ನಮ್ಮ ಶಾಲೆಯಲ್ಲಿ ಗೊಪ್ಪೇನಹಳ್ಳಿ ಆರೋಗ್ಯ ಕೇಂದ್ರದ ವತಿಯಿಂದ ಮಕ್ಕಳಿಗೆ ಜಂತು ಹುಳು ನಿವಾರಣೆ ಕುರಿತು ಜಾಗೃತಿ ಮಾಡಿಸಲಾಯಿತು. ಇದೇ ಸಂದರ್ಭದಲ್ಲಿ ಎಲ್ಲ ಮಕ್ಕಳಿಗೆ ಜಂತು ಹುಳು ನಿವಾರಣೆಯ ಮಾತ್ರೆಗಳನ್ನು ಸಾಮೂಹಿಕವಾಗಿ ವಿತರಿಸಲಾಯಿತು...
|
 |
| ದಿನಾಂಕ 22-11-2021 ರಂದು ನಮ್ಮ ಶಾಲೆಯಲ್ಲಿ ದಾಸಶ್ರೇಷ್ಟ ಕನಕದಾಸರ ಜಯಂತಿಯನ್ನು ಆಚರಿಸಲಾಯಿತು |
 |
| ನಮ್ಮ ಶಾಲೆಯ ಸ್ಥಳೀಯ ಸಲಹಾ ಸಮಿತಿಯ ಸದಸ್ಯರಾಗಿದ್ದ ವಡ್ನಾಳ್ ಗ್ರಾಮದ ಶರಣ ಬಿ ಜಯಪ್ಪನವರು ದಿನಾಂಕ 16-11-2021 ರ ಮಂಗಳವಾರ ಅನಾರೋಗ್ಯದಿಂದ ನಿಧನರಾದರು. ಇವರ ನಿಧನಕ್ಕೆ ಶಾಲಾ ಸ್ಥಳೀಯ ಸಲಹಾ ಸಮಿತಿಯವರು, ಮುಖ್ಯೋಪಾಧ್ಯಾಯರು ಮತ್ತು ಸಿಬ್ಬಂದಿ ವರ್ಗದವರು ಸಂತಾಪ ಸೂಚಿಸಿ ಮೃತರ ಆತ್ಮಕ್ಕೆ ಚಿರಶಾಂತಿ ದೊರೆಯಲೆಂದು ಪ್ರಾರ್ಥಿಸಿದರು. |
 |
| ಇಂದು ನಮ್ಮ ಶಾಲೆಯಲ್ಲಿ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳ ಪೋಷಕರ ಸಭೆ ಆಯೋಜಿಸಲಾಗಿತ್ತು. ಸಭೆಯಲ್ಲಿ ಮಕ್ಕಳ ಶೈಕ್ಷಣಿಕ ಪ್ರಗತಿಯ ಕುರಿತು ಚರ್ಚಿಸಲಾಯಿತು. |
 |
| ದಿನಾಂಕ : 12-11-2021 ರಂದು ನಮ್ಮ ಶಾಲೆಯಲ್ಲಿ ಭಾರತದ ಸ್ವಾತಂತ್ರ್ಯದ 75 ನೇ ಅಜಾದ್ ಕಾ ಅಮೃತ್ ಮಹೋತ್ಸವ ಆಚರಣೆ ಪ್ರಯುಕ್ತ ಕಾನೂನು ಅರಿವು-ನೆರವು ಕಾರ್ಯಕ್ರಮವನ್ನು ತಾಲ್ಲೂಕು ಕಾನೂನು ಸೇವಾ ಸಮಿತಿ ಚನ್ನಗಿರಿ, ವಕೀಲರ ಸಂಘ ಚನ್ನಗಿರಿ ಹಾಗೂ ವಿವಿಧ ಸರ್ಕಾರಿ ಇಲಾಖೆಗಳ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿತ್ತು. ಈ ಸಂದರ್ಭದಲ್ಲಿ ಚನ್ನಗಿರಿ ತಾಲ್ಲೂಕು ಕೋರ್ಟ್‌ನ ಸಿವಿಲ್ ನ್ಯಾಯಾಧೀಶರಾದ ಶ್ರೀಮತಿ ಕನ್ನಿಕ ಮೇಡಂ,ಸರ್ಕಾರಿ ಅಭಿಯೋಜಕರಾದ ಸರಿತಾ ಮೇಡಂ, ಪ್ರಾದೇಶಿಕ ಸಾರಿಗೆ ಅಧಿಕಾರಿಗಳಾದ ಮಹಮ್ಮದ್ ಕಾಲಿದ್ ಸರ್, ಚನ್ನಗಿರಿ ಉಪ ನಿರೀಕ್ಷಕರಾದ ಚಂದ್ರಶೇಖರ್ ಸರ್, ವಕೀಲರ ಸಂಘದ ಅಧ್ಯಕ್ಷರಾದ ರುದ್ರಪ್ಪನವರು ಸಮಾರಂಭದಲ್ಲಿ ಹಾಜರಿದ್ದರು. ಈ ಸಮಾರಂಭವನ್ನು ಪ್ರಾದೇಶಿಕ ಸಾರಿಗೆ ಅಧಿಕಾರಿಗಳಾದ ಮಹಮ್ಮದ್ ಕಾಲಿದ್ ಸರ್ ಉದ್ಘಾಟಿಸಿದರೆ ಶಾಲಾ ಮುಖ್ಯೋಪಾಧ್ಯಾಯರಾದ ಧನಂಜಯ ಸರ್ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಮಕ್ಕಳಿಗೆ ಕಾನೂನಿನ ಬಗ್ಗೆ ಅರಿವು ಮೂಡಿಸಲಾಯಿತು... |
 |
| ದಿನಾಂಕ 16-09-2021 ರಂದು ವಿಶ್ವ ಓಝೋನ್ ದಿನಾಚರಣೆಯನ್ನು ಆಚರಿಸಲಾಯಿತು, ವಿಜ್ಞಾನ ಶಿಕ್ಷಕರಾದ ಡಿ ಯೋಗೇಂದ್ರಪ್ಪರವರು ಮಕ್ಕಳಿಗೆ ಓಝೋನ್ ಪದರದ ಕುರಿತು ವಿವರಿಸಿದರು |
 |
| ದಿನಾಂಕ : 05-09-2021 ರಂದು ಸಹಾಯಕ ಕೃಷಿ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗ, ರೈತ ಸಂಪರ್ಕ ಕೇಂದ್ರ ಪಾಂಡೋಮಟ್ಟಿ ಮತ್ತು ಶ್ರೀ ರುದ್ರೇಶ್ವರ ಪ್ರೌಢಶಾಲೆಯ ಸಂಯುಕ್ತ ಆಶ್ರಯದಲ್ಲಿ "ಮುಖ್ಯಮಂತ್ರಿ ರೈತ ವಿದ್ಯಾ ನಿಧಿ" ಲೋಕಾರ್ಪಣೆ ಕಾರ್ಯಕ್ರಮದ ನೇರಪ್ರಸಾರವನ್ನು ನಮ್ಮ ಶಾಲೆಯ ಶ್ರೀ ಶಿವಕುಮಾರ ರಂಗಮಂದಿರದಲ್ಲಿ ಆಯೋಜಿಸಲಾಗಿತ್ತು. |
 |
| ಇಂದು ನಮ್ಮ ಶಾಲೆಯಲ್ಲಿ ಡಾ. ಬಿ.ಆರ್ ಅಂಬೇಡ್ಕರ್ ರವರ 130ನೇ ಜಯಂತಿಯನ್ನು ಆಚರಿಸಲಾಯಿತು. |
-
-
ಶ್ರೀ ಮದುಜ್ಜಯಿನಿ ಸದ್ಧರ್ಮ ಸಿಂಹಾಸನಾಧೀಶ ಹಿರಿಯ ತರಳಬಾಳು ಜಗದ್ಗುರು ಲಿಂಗೈಕ್ಯ ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳವರ 28ನೆಯ ಶ್ರದ್ಧಾಂಜಲಿ ಪ್ರಯುಕ್ತ ಭಕ್ತಿ ...
-
-
ದಿನಾಂಕ 28-10-2021 ರಂದು ಮಾತಾಡ್ ಮಾತಾಡ್ ಕನ್ನಡ ಕಾರ್ಯಕ್ರಮದ ಅಂಗವಾಗಿ ಕನ್ನಡ ತಾಯಿ ಭುವನೇಶ್ವರಿ ಪೋಟೋ ಜೊತೆಗೆ ಕನ್ನಡ ಘೋಷಣೆಗಳನ್ನು ಹಿಡಿದು ಊರಿನಲ್ಲಿ ಜಾಥಾ ನಡೆ...