 |
| ಇಂದು ನಮ್ಮಶಾಲೆಯಲ್ಲಿ ಶಾಲಾ ವಾರ್ಷಿಕೋತ್ಸವ, ಶಾರದಾ ಪೂಜಾ ಕಾರ್ಯಕ್ರಮ ಮತ್ತು ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಿಗೆ ಬೀಳ್ಕೋಡಿಗೆ ಕಾರ್ಯಕ್ರಮ ಆಯೋಜಿಸಲಾಗಿತ್ತು.... ಕಾರ್ಯಕ್ರಮದಲ್ಲಿ ಸ್ಥಳೀಯ ಸಲಹಾ ಸಮಿತಿಯ ಉಪಾಧ್ಯಕ್ಷರು, ಸದಸ್ಯರುಗಳು ಭಾಗವಹಿಸಿದ್ದರು. ಮುಖ್ಯಶಿಕ್ಷಕರಾದ ಟಿ ಧನಂಜಯ ಸರ್ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಕ್ರೀಡೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. |
 |
| ಇಂದು ನಮ್ಮ ಶಾಲೆಯಲ್ಲಿ ವಿಶ್ವ ಗ್ರಾಹಕರ ಹಕ್ಕುಗಳ ದಿನವನ್ನು ಆಚರಿಸಲಾಯಿತು. ಬೆಳಗಿನ ಪ್ರಾರ್ಥನೆಯ ಸಮಯದಲ್ಲೇ ಶಿಕ್ಷಕರಾದ ಬಿ ಜಿ ಪ್ರಕಾಶ ಮಕ್ಕಳಿಗೆ ಗ್ರಾಹಕರ ಹಕ್ಕುಗಳ ದಿನದ ಕುರಿತು ಮಾಹಿತಿ ನೀಡಿದರು. ಈ ದಿನದ ಆಚರಣೆಯ ಹಿನ್ನೆಲೆ, ಯಾವಾಗಿನಿಂದ ಈ ದಿನವನ್ನು ಆಚರಿಸಲಾಗುತ್ತಿದೆ, ಅದರ ಉದ್ದೇಶ ಮತ್ತು ಗ್ರಾಹಕರು ವ್ಯಾಪಾರಿಗಳಿಂದ ಮೋಸ ಹೋದಂತ ಸಂದರ್ಭದಲ್ಲಿ ಗ್ರಾಹಕ ನ್ಯಾಯಾಲಯಗಳ ಮೂಲಕ ಪರಿಹಾರ ಪಡೆಯಬಹುದೆಂಬ ಮಾಹಿತಿಯನ್ನು ತಿಳಿಸಿದರು. ಇತರ ಶಿಕ್ಷಕರು ಉಪಸ್ಥಿತರಿದ್ದರು. |
 |
| ಇಂದು ನಮ್ಮ ಶಾಲೆಯಲ್ಲಿ SSLC ವಿದ್ಯಾರ್ಥಿಗಳಿಗೆ "ಪರೀಕ್ಷೆ ಒಂದು ಹಬ್ಬ - ಬನ್ನಿ ಸಂಭ್ರಮಿಸೋಣ" ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಪಾಂಡೋಮಟ್ಟಿ ಕ್ಲಸ್ಟರ್ ನ ECO ಮೌನೇಶ್ವರಾಚಾರ್ ಭಾಗವಹಿಸಿ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಮುಖ್ಯಶಿಕ್ಷಕರಾದ ಟಿ. ಧನಂಜಯ ವಹಿಸಿದ್ದರು. |
 |
ನಮ್ಮ ಎಸ್.ಎಸ್.ಎಲ್.ಸಿ ಪರೀಕ್ಷಾ ಕೇಂದ್ರಕ್ಕೆ ಲಗತ್ತಾಗ ಶಾಲೆಗಳಾದ ನಮ್ಮಶಾಲೆ (ಗೊಪ್ಪೇನಹಳ್ಳಿ), ವಡ್ಡನಹಾಳ್, ಕಂಚಿಗನಹಾಳ್ ಮತ್ತು ರಾಜಗೊಂಡನಹಳ್ಳಿ ಶಾಲೆಯ ಎಸ್.ಎಸ್.ಎಲ್.ಸಿ ಮಕ್ಕಳು ಇಂದಿನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಇಂಗ್ಲೀಷ್, ವಿಜ್ಞಾನ, ಗಣಿತ ವಿಷಯಗಳ ಸಂಪನ್ಮೂಲ ವ್ಯಕ್ತಿಗಳಿಂದ ಆಯಾ ವಿಷಯಗಳ ಪರೀಕ್ಷಾ ತಯಾರಿ ಬಗ್ಗೆ ಸಂವಾದ ಏಪ್ರಡಿಸಲಾಗಿತ್ತು. ಹಾಗೆಯೇ ವ್ಯಕ್ತಿತ್ವ ವಿಕಸನ ತರಬೇತಿಯನ್ನೂ ಏರ್ಪಡಿಸಲಾಗಿತ್ತು.
|
 |
| ಇಂದು ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳ ಪೋಷಕರ ಸಭೆಯನ್ನು ಆಯೋಜಿಸಲಾಗಿತ್ತು. ರಾಜ್ಯಮಟ್ಟದ ಪೂರ್ವ ಸಿದ್ಧತಾ ಪರೀಕ್ಷೆಯ ಫಲಿತಾಂಶ ಕುರಿತು ಚರ್ಚಿಸಲಾಯಿತು.... |
 |
| ಸರ್ ಸಿ ವಿ ರಾಮನ್ ರವರ ಜನ್ಮದಿನವನ್ನು ರಾಷ್ಟ್ರೀಯ ವಿಜ್ಞಾನ ದಿನವನ್ನಾಗಿ ಇಂದು ಆಚರಿಸಲಾಯಿತು. ಶಾಲೆಯ ವಿಜ್ಞಾನ ಶಿಕ್ಷಕರಾದ ಡಿ ಯೋಗೇಂದ್ರಪ್ಪ ಮತ್ತು ಟಿ ಕೆ ಶಿವಕುಮಾರ್ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳು ಹಲವಾರು ಪ್ರಯೋಗಗಳನ್ನು ಮಾಡಿ ವಿವರಿಸಿದರು. ಎಲ್ಲಾ ವಿದ್ಯಾರ್ಥಿಗಳು ಆಸಕ್ತಿಯಿಂದ ವೀಕ್ಷಿಸುತ್ತಿದ್ದರು... ಮುಖ್ಯಶಿಕ್ಷಕರಾದ ಟಿ ಧನಂಜಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಎಲ್ಲಾ ಶಿಕ್ಷಕರು ಕಾರ್ಯಕ್ರಮಕ್ಕೆ ಸಹಕರಿಸಿದರು. ಇಂದು ಎಲ್ಲರಿಗೂ ಸಿಹಿ ಊಟದ ವ್ಯವಸ್ಥೆ ಮಾಡಲಾಗಿತ್ತು. |
 |
| ರಾಷ್ಟ್ರೀಯ ವಿಜ್ಞಾನ ದಿನದಂದು ವಿದ್ಯಾರ್ಥಿಗಳ ರಂಗೋಲಿಯ ರಂಗಿನಲ್ಲಿ ಅರಳಿದ ವಿಜ್ಞಾನ ವಿಷಯದ ಚಿತ್ರಗಳು. |
 |
| ಶಾಲಾ ಮಟ್ಟದ ಕಲೋತ್ಸವ ಸ್ಪರ್ಧೆಯಲ್ಲಿ ಭಾಗವಹಿಸಿದ ಕುಶಾಲ್ ಪಿ ಕೆ. 10ನೇ ತರಗತಿ ವಿದ್ಯಾರ್ಥಿ ಜಾನಪದ ವಾದ್ಯ ಪ್ರಕಾರವಾದ ವೀರಗಾಸೆಯ ಸಮಾಳ ನುಡಿಸುವ ವೀಡಿಯೋವನ್ನು ಕಲೋತ್ಸವ 2021 ರ ವೆಬ್ಸೈಟ್ಗೆ ಅಪ್ಲೋಡ್ ಮಾಡಲಾಗಿತ್ತು. ಇದೀಗ ಆ ವಿದ್ಯಾರ್ಥಿ ಜಿಲ್ಲಾ ಮಟ್ಟ ಕಲೋತ್ಸವ ಪಟ್ಟಿಯಲ್ಲಿ ಸ್ಥಾನ ಪಡೆದು ಶಾಲೆಗೆ ಕೀರ್ತಿ ತಂದಿರುತ್ತಾನೆ. ಶಾಲೆಯ ಶಿಕ್ಷಕರುಗಳು ಮತ್ತು ವಿದ್ಯಾರ್ಥಿಗಳು ಅಭಿನಂದನೆ ಸಲ್ಲಿಸಿರುತ್ತಾರೆ. |
-
-
ಇಂದು ನಮ್ಮ ಶಾಲೆಯಲ್ಲಿ ವಿಶ್ವ ಗ್ರಾಹಕರ ಹಕ್ಕುಗಳ ದಿನವನ್ನು ಆಚರಿಸಲಾಯಿತು. ಬೆಳಗಿನ ಪ್ರಾರ್ಥನೆಯ ಸಮಯದಲ್ಲೇ ಶಿಕ್ಷಕರಾದ ಬಿ ಜಿ ಪ್ರಕಾಶ ಮಕ್ಕಳಿಗೆ ಗ್ರಾಹಕರ ಹಕ್ಕುಗಳ ದ...
-
ಶಿಕ್ಷಕರ ದಿನಾಚರಣೆ ವಿದ್ಯಾಗಮ ಕಾರ್ಯಕ್ರಮದ ಅನುಷ್ಟಾನ ವಿದ್ಯಾಗಮ ಕಾರ್ಯಕ್ರಮದ ಅನುಷ್ಟಾನ ವಿದ್ಯಾಗಮ ಕಾರ್ಯಕ್ರಮದ ಅನುಷ್ಟಾನ ವಿದ್ಯಾಗಮ ಕಾರ್...
-
ಇಂದು ನಮ್ಮ ಶಾಲೆಯಲ್ಲಿ 2021-22 ನೇ ಸಾಲಿನ ಶಾಲಾ ಸಂಸತ್ತಿನ ಬಜೆಟ್ ನ್ನು ಶಾಲಾ ಸಂಸತ್ತಿನ ಹಣಕಾಸು ಮಂತ್ರಿಯಾದ ಕುಮಾರಿ ಹರ್ಷಿತ 9ನೇ ತರಗತಿ ಇವರು ಎಲ್ಲರ ಸಮ್ಮುಖದಲ್ಲಿ ...
-
-
ಇಂದು ನಮ್ಮ ಶಾಲೆಯಲ್ಲಿ ಅಂತರಾಷ್ಟ್ರೀಯ ಯೋಗ ದಿನದ ಪ್ರಯುಕ್ತ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಯೋಗಾಸನ ಮಾಡುವ ಮೂಲಕ ಯೋಗ ದಿನವನ್ನು ಯಶಸ್ವಿಯಾಗಿ ಆಚರಿಸಲಾಯಿತು. ಇದೇ ಸ...
-
ಶ್ರೀ ಮದುಜ್ಜಯಿನಿ ಸದ್ಧರ್ಮ ಸಿಂಹಾಸನಾಧೀಶ ಹಿರಿಯ ತರಳಬಾಳು ಜಗದ್ಗುರು ಲಿಂಗೈಕ್ಯ ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳವರ 28ನೆಯ ಶ್ರದ್ಧಾಂಜಲಿ ಪ್ರಯುಕ್ತ ಭಕ್ತಿ ...
-
ಇಂದು ನಮ್ಮ ಶಾಲೆಯಲ್ಲಿ ಸಂವಿಧಾನ ದಿನಾಚರಣೆಯನ್ನು ಆಚರಿಸಲಾಯಿತು
-
ಗೊಪ್ಪೇನಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದಿಂದ ಇಂದು ನಮ್ಮ ಶಾಲೆಯ 15 ರಿಂದ 18 ವಯೋಮಾನದ 44 ಮಕ್ಕಳಿಗೆ ಕೋವ್ಯಾಕ್ಸಿನ್ ಲಸಿಕೆ ಹಾಕಲಾಯಿತು. ವಿದ್ಯಾರ್ಥಿಗಳು ಪೋಷಕರಿಂದ ...
-