 |
| ಸರ್ ಸಿ ವಿ ರಾಮನ್ ರವರ ಜನ್ಮದಿನವನ್ನು ರಾಷ್ಟ್ರೀಯ ವಿಜ್ಞಾನ ದಿನವನ್ನಾಗಿ ಇಂದು ಆಚರಿಸಲಾಯಿತು. ಶಾಲೆಯ ವಿಜ್ಞಾನ ಶಿಕ್ಷಕರಾದ ಡಿ ಯೋಗೇಂದ್ರಪ್ಪ ಮತ್ತು ಟಿ ಕೆ ಶಿವಕುಮಾರ್ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳು ಹಲವಾರು ಪ್ರಯೋಗಗಳನ್ನು ಮಾಡಿ ವಿವರಿಸಿದರು. ಎಲ್ಲಾ ವಿದ್ಯಾರ್ಥಿಗಳು ಆಸಕ್ತಿಯಿಂದ ವೀಕ್ಷಿಸುತ್ತಿದ್ದರು... ಮುಖ್ಯಶಿಕ್ಷಕರಾದ ಟಿ ಧನಂಜಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಎಲ್ಲಾ ಶಿಕ್ಷಕರು ಕಾರ್ಯಕ್ರಮಕ್ಕೆ ಸಹಕರಿಸಿದರು. ಇಂದು ಎಲ್ಲರಿಗೂ ಸಿಹಿ ಊಟದ ವ್ಯವಸ್ಥೆ ಮಾಡಲಾಗಿತ್ತು. |
 |
| ರಾಷ್ಟ್ರೀಯ ವಿಜ್ಞಾನ ದಿನದಂದು ವಿದ್ಯಾರ್ಥಿಗಳ ರಂಗೋಲಿಯ ರಂಗಿನಲ್ಲಿ ಅರಳಿದ ವಿಜ್ಞಾನ ವಿಷಯದ ಚಿತ್ರಗಳು. |
 |
| ಶಾಲಾ ಮಟ್ಟದ ಕಲೋತ್ಸವ ಸ್ಪರ್ಧೆಯಲ್ಲಿ ಭಾಗವಹಿಸಿದ ಕುಶಾಲ್ ಪಿ ಕೆ. 10ನೇ ತರಗತಿ ವಿದ್ಯಾರ್ಥಿ ಜಾನಪದ ವಾದ್ಯ ಪ್ರಕಾರವಾದ ವೀರಗಾಸೆಯ ಸಮಾಳ ನುಡಿಸುವ ವೀಡಿಯೋವನ್ನು ಕಲೋತ್ಸವ 2021 ರ ವೆಬ್ಸೈಟ್ಗೆ ಅಪ್ಲೋಡ್ ಮಾಡಲಾಗಿತ್ತು. ಇದೀಗ ಆ ವಿದ್ಯಾರ್ಥಿ ಜಿಲ್ಲಾ ಮಟ್ಟ ಕಲೋತ್ಸವ ಪಟ್ಟಿಯಲ್ಲಿ ಸ್ಥಾನ ಪಡೆದು ಶಾಲೆಗೆ ಕೀರ್ತಿ ತಂದಿರುತ್ತಾನೆ. ಶಾಲೆಯ ಶಿಕ್ಷಕರುಗಳು ಮತ್ತು ವಿದ್ಯಾರ್ಥಿಗಳು ಅಭಿನಂದನೆ ಸಲ್ಲಿಸಿರುತ್ತಾರೆ. |
 |
| ರಾಜ್ಯ ಮಟ್ಟದ ಸಮನ್ವಯ ಸಂಸ್ಥೆ ಕರ್ನಾಟಕ ಮತ್ತು ಶ್ರೀ ರುದ್ರೇಶ್ವರ ಪ್ರೌಢಶಾಲೆಯ ಸಹಯೋಗದೊಂದಿಗೆ ಮಾದಕ ವಸ್ತುಗಳ ನಿಯಂತ್ರಣ ಕುರಿತ ಒಂದು ದಿನದ ಜಾಗೃತಿ ಕಾರ್ಯಕ್ರಮವನ್ನು ಇಂದು ಆಯೋಜಿಸಲಾಗಿತ್ತು. |
 |
| ಇಂದು ನಮ್ಮ ಶಾಲೆಯಲ್ಲಿ 2021-22 ನೇ ಸಾಲಿನ ಸೆಪ್ಟೆಂಬರ್ ಮತ್ತು ಅಕ್ಟೋಬರ್ ತಿಂಗಳ ಆಹಾರ ಸಾಮಗ್ರಿಗಳನ್ನು ವಿದ್ಯಾರ್ಥಿಗಳ ಪೋಷಕರನ್ನು ಶಾಲೆಗೆ ಕರೆಸಿ ನಿಗದಿತ ನಮೂನೆಯಲ್ಲಿ ಸಹಿ ಪಡೆದು ವಿತರಿಸಲಾಯಿತು. |
 |
| ಇಂದು ನಮ್ಮ ಶಾಲೆಯಲ್ಲಿ ಗೊಪ್ಪೇನಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದ ವತಿಯಿಂದ ಕುಷ್ಟರೋಗ ವಿರೋದಿ ಮಾಸಾಚರಣೆ ಕಾರ್ಯವನ್ನು ಆಯೋಜಿಸಲಾಗಿತ್ತು. ಆರೋಗ್ಯ ಸಿಬ್ಬಂದಿಗಳಾದ ವಿನಯ್ ರವರು ಕುಷ್ಟರೋಗದ ಲಕ್ಷಣಗಳು, ಅದರ ಪರಿಣಾಮಗಳು ಮತ್ತು ಬರದಂತೆ ತಡೆಯುವ ಮುನ್ನೆಚ್ಚರಿಕೆ ಕ್ರಮಗಳನ್ನು ತಿಳಿಸಿ ಹೇಳಿದರು. ಇನ್ನೋರ್ವ ಸಿಬ್ಬಂದಿಯಾದ ಅಶೋಕ್ ರವರು ಡೆಂಗ್ಯೂ ರೋಗದ ಲಕ್ಷಣಗಳು, ಹರಡುವ ವಿಧಾನ ಮತ್ತು ಮುನ್ನೆಚ್ಚರಿಕೆ ಕ್ರಮಗಳ ಕುರಿತಹ ಮಾಹಿತಿ ನೀಡಿದರು. |
 |
| ಇಂದು ನಮ್ಮ ಶಾಲೆಯಲ್ಲಿ 15 ರಿಂದ 18 ವಯೋಮಾನದ ಮಕ್ಕಳಿಗೆ ಕೋವ್ಯಾಕ್ಸಿನ್ 2ನೇ ಡೋಸ್ ನ್ನು ನೀಡಲಾಯಿತು. ಗೊಪ್ಪೇನಹಳ್ಳಿಯ ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿಗಳು ಲಸಿಕಾಕರಣ ಅಭಿಯಾನವನ್ನು ಯಶಸ್ವಿಗೊಳಿಸಿದರು. |
-
ಇಂದು ನಮ್ಮ ಶಾಲೆಯಲ್ಲಿ ಸಂವಿಧಾನ ದಿನಾಚರಣೆಯನ್ನು ಆಚರಿಸಲಾಯಿತು
-
-
ನಮ್ಮ ಶಾಲಾ ಕುಟುಂಬದ ಎಲ್ಲ ಸದಸ್ಯರಿಗೆ, ಶಾಲಾ ಸ್ಥಳೀಯ ಸಲಹಾ ಸಮಿತಿಯ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಸರ್ವ ಸದಸ್ಯರುಗಳಿಗೆ ಮತ್ತು ಶಾಲೆಯ ಎಲ್ಲಾ ಪ್ರೀತಿಯ ವಿದ್ಯಾರ...
-
ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ 03-03-2021 ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಸಂದರ್ಭದಲ್ಲಿ ಗೊಪ್ಪೇನಹಳ್ಳಿಯ ಸರ್ಕಾರಿ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲರಾದ ...
-
-
-
ಸ್ಥಳೀಯ ಸಲಹಾ ಸಮಿತಿಯ ಅಧ್ಯಕ್ಷರಾದ ಶರಣ ಕೆ ಶಿವಲಿಂಗಪ್ಪನವರಿಂದ ಶಾಲಾ ಕಿರುಚಿತ್ರ ಬಿಡುಗಡೆ ಗಣರಾಜ್ಯೋತ್ಸವ ಆಚರಣೆ 26-01-2021 ಶಾಲೆಯ ಪ್ರವೇಶ ದ್ವಾರದ ನೋಟ
-
ಇಂದು ನಮ್ಮ ಶಾಲೆಯಲ್ಲಿ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳ ಪೋಷಕರ ಸಭೆ ಆಯೋಜಿಸಲಾಗಿತ್ತು. ಸಭೆಯಲ್ಲಿ ಮಕ್ಕಳ ಶೈಕ್ಷಣಿಕ ಪ್ರಗತಿಯ ಕುರಿತು ಚರ್ಚಿಸಲಾಯಿತು.